ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ನಗರಸಭೆ ಉಪ ಚುನಾವಣೆ: ಎಸ್ ಡಿಪಿಐ ಗೆಲುವು

Last Updated 30 ಡಿಸೆಂಬರ್ 2021, 5:33 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ನಗರಸಭೆಯ 6ನೇ ವಾರ್ಡ್ ಗೆ ನಡೆದ ಉಪ ಚುನಾವಣೆಯಲ್ಲಿ ಎಸ್ ಡಿಪಿಐ ಗೆಲುವು ಸಾಧಿಸಿದೆ.

ಈ ಹಿಂದೆಯೂ ಈ ವಾರ್ಡ್ ನಲ್ಲಿ ಎಸ್ ಡಿಪಿಐ ಗೆಲುವು ಸಾಧಿಸಿತ್ತು. ಸದಸ್ಯರಾಗಿದ್ದ ಸಮೀವುಲ್ಲಾ ಅವರ ಅಕಾಲಿಕ ನಿಧನದಿಂದಾಗಿ ಉಪಚುನಾವಣೆ ನಡೆದಿತ್ತು.

ಎಸ್ ಡಿಪಿಐ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.
ಎಸ್ ಡಿಪಿಐ ನಿಂದ ಅಫ್ಸರ್ ಪಾಷ, ಕಾಂಗ್ರೆಸ್ ನಿಂದ ಸೈಯದ್ ಅತೀಕ್ ಅಹಮದ್, ಜೆಡಿಎಸ್ ನಿಂದ ಮೊಹಮ್ಮದ್ ಜಾವೀದ್ ಹಾಗೂ ಬಿಜೆಪಿಯಿಂದ ಪಿ.ಮಹೇಶ್ ಸ್ಪರ್ಧಿಸಿದ್ದರು.
1,801 ಮತದಾರರ ಪೈಕಿ, 1,209 ಮಂದಿ ಮತದಾನ ಮಾಡಿದ್ದರು.

ಅಫ್ಸರ್ ಪಾಷಾ ಅವರು 651 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.

ಕಾಂಗ್ರೆಸ್ ನ ಸೈಯದ್ ಅತೀಕ್ ಅಹಮದ್ ಅವರು 399, ಜೆಡಿಎಸ್ ನ ಮೊಹಮ್ಮದ್ ಜಾವೀದ್ ಅವರು 82 ಹಾಗೂ ಬಿಜೆಪಿಯ ಮಹೇಶ್ ಅವರು 73 ಮತಗಳನ್ನು ಗಳಿಸಿದ್ದಾರೆ. ನೋಟಾಗೆ‌ ನಾಲ್ಕು ಮತಗಳು ಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT