ಚಾಮರಾಜನಗರ: ತೆಂಗಿನಕಾಯಿ ದರ ಗಗನಮುಖಿಯಾಗಿದ್ದು ಗ್ರಾಹಕರಿಗೆ ದರ ಹೆಚ್ಚಳದ ಬಿಸಿ ತಟ್ಟಿದೆ. ತಿಂಗಳ ಹಿಂದಷ್ಟೆ ಮಾರುಕಟ್ಟೆಯಲ್ಲಿ ₹20 ರಿಂದ ₹30ಕ್ಕೆ ಸಿಗುತ್ತಿದ್ದ ತೆಂಗಿನಕಾಯಿ ಪ್ರಸ್ತುತ ₹50ಕ್ಕೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹80 ರಿಂದ ₹90ಕ್ಕೆ ತಲುಪಿದೆ. ದರ ಏರಿಕೆ ತೆಂಗು ಬೆಳೆಗಾರರಿಗೆ ಸಂತಸ ತಂದರೆ ಗ್ರಾಹಕರು ಕಂಗಾಲಾಗಿದ್ದಾರೆ.

‘ದುಬಾರಿ ದರ ಒಂದೆಡೆಯಾದರೆ ಮಾರುಕಟ್ಟೆಯಲ್ಲಿ ಗುಣಮಟ್ಟದ, ಬಲಿತ ಕಾಯಿಗಳ ಕೊರತೆ ಕಾಡುತ್ತಿದೆ. ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಎಳಸು ಹಾಗೂ ಕಡಿಮೆ ಗಾತ್ರದ ತೆಂಗಿನಕಾಯಿಗಳು ಹೆಚ್ಚಾಗಿ ಪೂರೈಕೆಯಾಗಿದ್ದು ಸಣ್ಣ ಕಾಯಿಗೂ ₹ 40 ರಿಂದ ₹ 50 ದರ ಕೊಡಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಗ್ರಾಹಕರು.

‘ಚಟ್ನಿ, ಸಾಂಬಾರ್, ಗೊಜ್ಜು ಸೇರಿದಂತೆ ಮಸಾಲೆ ಪದಾರ್ಥಗಳ ತಯಾರಿಕೆಗೆ ತೆಂಗಿನಕಾಯಿ ಅಗತ್ಯವಾಗಿ ಬೇಕಿದ್ದು ಪ್ರತಿದಿನ ಕನಿಷ್ಠ 1 ರಿಂದ 2 ತೆಂಗಿನಕಾಯಿ ಅಗತ್ಯವಿರುವುದರಿಂದ 100 ವ್ಯಯಿಸಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗೃಹಿಣಿ ರಾಧಾ.

‘ಇಡ್ಲಿ, ದೋಸೆ, ಪುಲಾವ್ ಸಹಿತ ಬೆಳಗಿನ ಬಹುತೇಕ ಉಪಾಹಾರದ ಜೊತೆಗೆ ಚಟ್ನಿ ತಯಾರಿಸಲು ಹಾಗೂ ಸಾಂಬಾರ್, ಪಲ್ಯಕ್ಕೆ ತೆಂಗಿನಕಾಯಿ ಹೆಚ್ಚಾಗಿ ಬಳಸಬೇಕಾಗಿರುವುದರಿಂದ ತೆಂಗಿನಕಾಯಿ ದರ ಏರಿಕೆ ಹೋಟೆಲ್ ಉದ್ಯಮಕ್ಕೂ ಪೆಟ್ಟುನೀಡಿದೆ. ದರ ಇಳಿಕೆಯಾಗದಿದ್ದರೆ ಆಹಾರ ಪದಾರ್ಥಗಳ ದರ ಏರಿಕೆ ಅನಿವಾರ್ಯವಾಗುತ್ತದೆ ಎನ್ನುತ್ತಾರೆ’ ನಗರದ ಹೋಟೆಲ್ ಮಾಲೀಕ ಶ್ರೀನಿವಾಸ್.

‘ತಿಂಗಳಲ್ಲಿ ತೆಂಗಿನ ಕಾಯಿ ದರ ಒಂದೂವರೆ ಪಟ್ಟು ಹೆಚ್ಚಾಗಿದೆ. ಗುಣಮಟ್ಟದ ತೆಂಗಿನಕಾಯಿಗಳು ಸಿಗುತ್ತಿಲ್ಲ. ಮಸಾಲೆ ಪದಾರ್ಥಗಳಿಗೆ ತೆಂಗಿನತುರಿಯನ್ನು ಹೆಚ್ಚು ಬಳಸುವ ಬದಲು ಹುರಿಗಡಲೆ ಬಳಕೆ ಮಾಡಬೇಕಾಗಿದೆ’ ಎನ್ನುತ್ತಾರೆ ಹೋಟೆಲ್ ಮಾಲೀಕರು.

‘ರೋಗಬಾಧೆ, ಬಿಸಲಿನ ಪ್ರಮಾಣ ಹೆಚ್ಚಳ ಪರಿಣಾಮ ತೆಂಗಿನಕಾಯಿ ಇಳುವರಿ ಭಾರಿ ಕುಸಿತವಾಗಿರುವುದು ದರ ಹೆಚ್ಚಳಕ್ಕೆ ಪ್ರಮುಖ ಕಾರಣ. ಜೊತೆಗೆ ಲಾಭದಾಯಕ ಎಂಬ ಕಾರಣಕ್ಕೆ ರೈತರು ತೆಂಗಿನಕಾಯಿ ಮಾರಾಟದ ಬದಲು ಎಳನೀರು ಮಾರಾಟಕ್ಕೆ ಒಲವು ತೋರುತ್ತಿರುವುದು ಕೂಡ ತೆಂಗಿನಕಾಯಿಗಳ ಕೊರತೆಗೆ ಕಾರಣವಾಗಿದೆ’ ಎನ್ನುತ್ತಾರೆ ವ್ಯಾಪಾರಿಗಳು.

ತರಕಾರಿ ದರ ಇಳಿಕೆ:

ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳ ದರ ಸ್ಥಿರವಾಗಿದೆ. ಟೊಮೆಟೊ ₹20 ರಿಂದ ₹30, ಬೀನ್ಸ್, ಬೆಂಡೆಕಾಯಿ, ಕ್ಯಾರೆಟ್, ಗೆಡ್ಡೆಕೋಸು, ಹಸಿಮೆಣಸು, ಈರುಳ್ಳಿ, ಆಲೂಗಡ್ಡೆ, ಚವಳಿಕಾಯಿ, ಬದನೆಕಾಯಿ ದರ ತಲಾ ₹ 40 ಇದೆ. ತರಕಾರಿ ದರ ಇಳಿಮುಖವಾಗಿರುವುದರಿಂದ ಖರೀದಿ ಉತ್ಸಾಹ ಹೆಚ್ಚಾಗಿದೆ.

ಬೀಟ್ರೂಟ್ ದರ ಕುಸಿತ

ತಿಂಗಳ ಹಿಂದೆ ಗರಿಷ್ಠ ₹60 ರಿಂದ ₹80 ತಲುಪಿದ್ದ ಬೀಟ್ರೂಟ್ ದರ ಪ್ರಸ್ತುತ ಕೇವಲ ₹15 ರಿಂದ ₹20ಕ್ಕೆ ಇಳಿದಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಬೀಟ್ರೂಟ್ ಆವಕವಾಗುತ್ತಿರುವುದು ದರ ಇಳಿಕೆಗೆ ಪ್ರಮುಖ ಕಾರಣ ಎನ್ನುತ್ತಾರೆ ವ್ಯಾಪಾರಿ ಮಧು.

ಕುಸಿದ ಬೆಳ್ಳುಳ್ಳಿ:

ಕೆ.ಜಿಗೆ ₹500ರ ಗಡಿ ತಲುಪಿದ್ದ ಬೆಳ್ಳುಳ್ಳಿ ದರ ಪಾತಾಳಕ್ಕೆ ಕುಸಿದೆ. ಗುಣಮಟ್ಟ ಹಾಗೂ ಗಾತ್ರಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಕೆ.ಜಿ ಬೆಳ್ಳುಳ್ಳಿ ₹120 ರಿಂದ ₹200ರವರೆಗೆ ಬೆಲೆ ಇದೆ. ವಾರದಿಂದ ವಾರಕ್ಕೆ ಬೆಳ್ಳುಳ್ಳಿ ದರ ಇಳಿಮುಖವಾಗುತ್ತಿದೆ ಎನ್ನುತ್ತಾರೆ ಹಾಪ್ಕಾಮ್ಸ್ ವ್ಯಾಪಾರಿ ಮಧು.

ತರಕಾರಿ ದರ (ಕೆ.ಜಿಗಳಲ್ಲಿ) ಟೊಮೆಟೊ;20–30 ಬೀನ್ಸ್;40 ಕ್ಯಾರೆಟ್;40 ಬೆಂಡೆಕಾಯಿ;40 ಎಲೆಕೋಸು;15 20 ಬೀಟ್ರೂಟ್;15–20 ಮೂಲಂಗಿ;25–30 ಗೆಡ್ಡಕೋಸು;40 ಹಾಗಲಕಾಯಿ;60 ಶುಂಠಿ;80 ಬೆಳ್ಳುಳ್ಳಿ;100 200 ಈರುಳ್ಳಿ;40 ಹಸಿಮೆಣಸು;40 ಕ್ಯಾಪ್ಸಿಕಂ;60 ತೊಂಡೆ;60 ಆಲೂಗಡ್ಡೆ;40 ಚವಳಿಕಾಯಿ;40 ಕುಂಬಳಕಾಯಿ;30 ಸೌತೇಕಾಯಿ;30 ಪಡವಲಕಾಯಿ;30 ಬದನೆಕಾಯಿ;40 ಅವರೆತೊಗರಿ;50 ತೊಗರಿಕಾಯಿ;80

ಹಣ್ಣುಗಳ ದರ ಸೇಬು;180 ದ್ರಾಕ್ಷಿ;120 ದಾಳಿಂಬೆ;180–200 ಮೋಸಂಬಿ;60 ಕಿತ್ತಳೆ;80 ಏಲಕ್ಕಿಬಾಳೆ;80 ಪಚ್ಚಬಾಳೆ;40–50 ಪಪ್ಪಾಯ;30 ಸಪೋಟ;80

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.