ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮದ್ಯ ಸಾಗಾಟ: 10 ಮಂದಿ ಬಂಧನ

Last Updated 8 ಜೂನ್ 2021, 17:00 IST
ಅಕ್ಷರ ಗಾತ್ರ

ಚಾಮರಾಜನಗರ: ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಕ್ಕಾಗಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ 10 ಮಂದಿಯನ್ನು ಚಾಮರಾಜನಗರ ಗ್ರಾಮಾಂತರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಆರೋಪಿಗಳಿಂದ ಆರು ಬೈಕ್‌ಗಳು ಹಾಗೂ 90 ಎಂ.ಎಲ್‌ನ 2,000 ಮದ್ಯದ ಪೌಚ್‌ಗಳನ್ನು (103 ಲೀಟರ್‌) ವಶಕ್ಕೆ ಪಡೆದಿದ್ದಾರೆ. ಇದರ ಮೌಲ್ಯ 70 ಸಾವಿರ ಎಂದು ಪೊಲೀಸರು ತಿಳಿಸಿದ್ದಾರೆ.

ಅರಕಲವಾಡಿಯ ಮಲ್ಲಿಕಾರ್ಜುನ, ಭೋಗಾಪುರದ ಸುರೇಶ್‌, ಕೆಸ್ತೂರಿನ ಪರಶಿವಮೂರ್ತಿ,ಮಾದಾಪುರದ ನಾಗರಾಜು, ತಮಿಳುನಾಡಿನ ಶಕ್ತಿವೇಲು, ಬೆಂಡರವಾಡಿಯ ಸತೀಶ್‌, ದೊಡ್ಡರಾಯಪೇಟೆಯ ಲಿಂಗರಾಜು, ಹೆಗ್ಗವಾಡಿಯ ಶ್ರೀನಿವಾಸ್‌, ನಂಜದೇವನಪುರದ ಕುಮಾರ್‌, ಚಾಟಿಪುರದ ಮಹದೇವಯ್ಯ ಬಂಧಿತರು.

‘ಅಕ್ರಮ ಮದ್ಯ ಸಾಗಣೆ ಬಗ್ಗೆ ನಿಗಾ ಇಡುವುದಕ್ಕಾಗಿ ಪ್ರತ್ಯೇಕ ತಂಡವನ್ನು ರಚಿಸಲಾಗಿದ್ದು, ಮಸಗಾಪುರ, ಮಾದಾಪುರ, ಭೋಗಾಪುರ, ಕಾಚಳ್ಳಿ ಜಂಕ್ಷನ್‌ಗಳಲ್ಲಿ ಕಾರ್ಯಾಚರಣೆ ನಡೆಸಿ 10 ಮಂದಿಯನ್ನು ಬಂಧಿಸಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಕ್ಕಾಗಿ ಬೈಕ್‌ಗಳಲ್ಲಿ ಮದ್ಯ ಸಾಗಿಸುತ್ತಿದ್ದರು’ ಎಂದು ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ಬಿ.ಪುಟ್ಟಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT