ಗುಂಡ್ಲುಪೇಟೆ: ಗುಂಡ್ಲುಪೇಟೆ ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ₹18 ಲಕ್ಷ ಆದಾಯ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಶಿವಣ್ಣ ತಿಳಿಸಿದರು.

ಪಟ್ಟಣದ ಬಸವೇಶ್ವರ ಕಮ್ಯೂನಿಟಿ ಹಾಲ್ನಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಗುಂಡ್ಲುಪೇಟೆ ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಎಚ್.ಎಸ್.ಮಹದೇವಪ್ರಸಾದ್ ಅವರ ಸಹಕಾರದಲ್ಲಿ ಹೊಸೂರಿನಿಂದ ಗುಂಡ್ಲುಪೇಟೆ ಪಟ್ಟಣಕ್ಕೆ ಸ್ಥಳಾಂತರ ಮಾಡಲಾಯಿತು. ನಂತರದಲ್ಲಿ 150 ಮಂದಿ ಇದ್ದ ಸಂಘದ ಸದಸ್ಯರ ಸಂಖ್ಯೆ ಈಗ ಮೂರು ಸಾವಿರ ಮೀರಿದೆ. ಸಂಘದ ಸದಸ್ಯರು, ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ನೌಕರರ ವರ್ಗದವರು ಸಮನ್ವಯದಿಂದ ಕೆಲಸ ಮಾಡುತ್ತಿರುವ ಕಾರಣ ಸಂಘವು ಉತ್ತಮ ಆರ್ಥಿಕ ವಹಿವಾಟು ನಡೆಸುವ ಮೂಲಕ ರೈತರು ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಮಾಡಿದೆ ಎಂದು ತಿಳಿಸಿದರು.

ಪ್ರಸ್ತುತ ಕ್ಷೇತ್ರದ ಶಾಸಕರು ಮತ್ತು ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕರು ಆಗಿರುವ ಎಚ್.ಎಂ.ಗಣೇಶ್ಪ್ರಸಾದ್ ಸಂಘದ ಬೆಳವಣಿಗೆಗೆ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಅದರಂತೆ ಸಂಘದ ಹೆಚ್ಚಿನ ಸದಸ್ಯರಿಗೆ ಬೇಡಿಕೆ ಅನುಸಾರ ಸಾಲಸೌಲಭ್ಯ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಸಹಕಾರ ಸಂಘವು ಇದೇ ರೀತಿಯಲ್ಲಿ ಪ್ರಗತಿಯತ್ತ ಸಾಗಲು ಸಂಘದಲ್ಲಿ ಸಾಲ ಪಡೆದ ಎಲ್ಲರೂ ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕು. ಇತರೆ ಸದಸ್ಯರು ಸಾಲ ಪಡೆಯಲು ಅನುಕೂಲ ಆಗುವಂತೆ ಮಾಡಬೇಕು ಎಂದು ಮನವಿ ಮಾಡಿದರು. ಎಲ್ಲಾ ಸದಸ್ಯರು ಯಶಸ್ವಿನಿ ಸೌಲಭ್ಯ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಸಂಘದ ಸ್ವಂತ ಕಟ್ಟಡ ಹೊಂದುವ ವಿಚಾರದಲ್ಲಿ ಎಲ್ಲರ ಸಹಕಾರದಲ್ಲಿ ಮುಂದಡಿ ಇಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.

ಈ ವೇಳೆ ಸಂಘದ ಉಪಾಧ್ಯಕ್ಷೆ ರಾಧಾಮಣಿ, ನಿರ್ದೇಶಕರಾದ ಚಂದ್ರಶೇಖರ್, ವೆಂಕಟೇಶ್, ಮಧು, ಎಂ.ಚೇತನ್ಕುಮಾರ್, ಆರ್.ಎಂ.ಮಹದೇವೇಗೌಡ, ಮಂಜುನಾಥ್, ಶಿವನಾಗಪ್ಪ, ಎನ್.ಕುಮಾರ್, ಮುಜಬುನ್ನಿಸಾ, ಬ್ಯಾಂಕ್ ಪ್ರತಿನಿಧಿ ಕಾರ್ತಿಕ್, ಸಂಘದ ಸಿಇಒ ಪಿ.ವನಿತ, ಮೋಹನಕುಮಾರಿ, ಟಿ.ಜಿ.ಪುಷ್ಪವತಿ, ಸಿ.ಎನ್.ಪೂರ್ಣಿಮಾ, ಜಿ.ಕೆ.ಸುನೀಲ್, ಮಹದೇವನಾಯಕ, ರವಿ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.