ಹನೂರು: ‘ಚಂಗಡಿ ಗ್ರಾಮ ಸ್ಥಳಾಂತರಿಸುವ ಕುರಿತು ಗ್ರಾಮಸ್ಥರು ಪುನರ್ವಸತಿಗೆ ಎಲ್ಲಾ ರೀತಿಯಲ್ಲಿಯೂ ಸಹಮತ ವ್ಯಕ್ತಪಡಿಸಿದರೆ ಮಾತ್ರ ಗ್ರಾಮ ಸ್ಥಳಾಂತರಪಡಿಸುವುದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.

ತಾಲೂಕಿನ ಚಂಗಡಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ ಗ್ರಾಮಸ್ಥರ ಕುಂದು ಕೊರತೆ ಆಲಿಸಿ ಮಾತನಾಡಿದ ಅವರು, ಚಂಗಡಿ ಗ್ರಾಮದ ಜನರಿಗೆ ತಮಗೆ ಸರ್ಕಾರದಿಂದ ಬದಲಿ ಜಾಗ ಈಗಾಗಲೇ ಗುರುತು ಮಾಡಿದ್ದು, ಗ್ರಾಮವು 485 ಎಕರೆ ಅಷ್ಟು ವಿಸ್ತೀರ್ಣ ಹೊಂದಿದೆ. ಈ ಸಂಬಂಧ ಪುನರ್ವಸತಿಯಾದರೆ ಕಾನೂನು ಬದ್ಧವಾಗಿ ನಿಮಗೆ ಎಲ್ಲಾ ರೀತಿಯ ಮೂಲ ಸೌಕರ್ಯ ಕಲ್ಪಿಸುವ ಭರವಸೆ ನೀಡಲಾಗುವುದು ಎಂದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದಿರುವ ಚಂಗಡಿ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿರುವ ಗ್ರಾಮ ಸ್ಥಳಾಂತರ ಪಡಿಸುವ ವಿಚಾರವಾಗಿ ಗ್ರಾಮಸ್ಥರ ಜೊತೆ ಸಮಾಲೋಚನೆ ನಡೆಸಲು ಬಂದಿದ್ದೇನೆ. ಇಲ್ಲಿ ವಾಸ ಇರುವುದರಿಂದ ಮೂಲ ಸೌಕರ್ಯ ಕೊರತೆ ಹೆಚ್ಚಾಗಿದ್ದು, ಕಾಡು ಪ್ರಾಣಿಗಳ ಹಾವಳಿಯಿಂದ ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ತಪ್ಪಿಸಿ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಹಾಗೂ ಸಂಬಂಧಿತ ಇನ್ನಿತರ ಇಲಾಖೆ ಅಧಿಕಾರಿಗಳೊಡನೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ರೈತ ಸಂಘ ಹಸಿರು ಸೇನೆ ಹಾಗೂ ಸಾಮೂಹಿಕ ನಾಯಕತ್ವದ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ಈ ಹಿಂದೆ ಗ್ರಾಮಸ್ಥರೆಲ್ಲರ ಅಭಿಪ್ರಾಯದೊಂದಿಗೆ ಸ್ಥಳ ಪರಿಶೀಲನೆ ಮಾಡಿ ಎಲ್ಲರೂ ಒಪ್ಪಿಗೆ ಪಡೆದು ಪ್ರಕ್ರಿಯೆಗಳು ಮುಗಿದಿದ್ದವು. ತದನಂತರ ಕೆಲವು ಕಾರಣಾಂತರಗಳಿಂದ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಇದೀಗ ಶಾಸಕರು ಸ್ಥಳಾಂತರ ಕುರಿತು ಕ್ರಮ ವಹಿಸುತ್ತೇವೆ ಎಂದು ಹೇಳಿದ್ದು ತೃಪ್ತಿಕರವಾಗಿದೆ. ಈ ಕೆಲಸ ಕೂಡ ಆಗುತ್ತದೆ ಎಂದು ನಂಬಿದ್ದೇವೆ’ ಎಂದರು.

ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುನಿಸಿದ್ದ, ರೈತ ಸಂಘದ ಮುಖಂಡರಾದ ಶಾಂತ್ ಕುಮಾರ್, ಕರಿಯಪ್ಪ, ದಂಟಳ್ಳಿ, ಕುರಟ್ಟಿ ಹೊಸೂರು, ಪೊನ್ನಾಚ್ಚಿ, ಭದ್ರಯ್ಯನ ಹಳ್ಳಿ ಗ್ರಾಮಸ್ಥರು ಇದ್ದರು.

ಸರ್ಕಾರದಿಂದ ಬದಲಿ ಜಾಗ ಈಗಾಗಲೇ ಗುರುತು | ಅಧಿಕಾರಿಗಳೊಡನೆ ಚರ್ಚೆ ನಡೆಸಿ ಕ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.