ಚಾಮರಾಜನಗರ: ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಕ್ರೀಡೆಗಳು ನೆರೆಹೊರೆಯ ಗ್ರಾಮಗಳ ಮಧ್ಯೆ ಸೌಹಾರ್ದತೆ ಹಾಗೂ ಪ್ರೀತಿ ಹೆಚ್ಚಲು ಸಹಕಾರಿಯಾಗುತ್ತವೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ತಾಲ್ಲೂಕಿನ ಬಿಸಲವಾಡಿ ಗ್ರಾಮದಲ್ಲಿ ಬಿಸಲವಾಡಿ ಯೂತ್ ಬಾಯ್ಸ್ ಸೀಸನ್-2 ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ‘ಗ್ರಾಮೀಣ ಭಾಗಗಳಲ್ಲಿ ಹೆಚ್ಚೆಚ್ಚು ಕ್ರೀಡಾಕೂಟಗಳು ನಡೆಯಬೇಕು, ಯುವಕರಲ್ಲಿ ಅಡಗಿರುವ ಕ್ರೀಡಾಪ್ರತಿಭೆ ಅನಾವರಣಕ್ಕೆ ಇಂತಹ ಕ್ರೀಡಾಕೂಟಗಳು ವೇದಿಕೆಯಾಗಲಿವೆ’ ಎಂದರು.

ಕ್ರೀಡಾಕೂಟಗಳ ಆಯೋಜನೆಯಿಂದ ಯುವಕರಲ್ಲಿ ಕ್ರೀಡಾ ಉತ್ಸಾಹ ಹೆಚ್ಚುತ್ತದೆ. ಜಿಲ್ಲೆ, ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಪ್ರೇರೇಪಣೆ ನೀಡುತ್ತದೆ. ಈಚೆಗೆ ಬಹಳಷ್ಟು ಗ್ರಾಮೀಣ ಪ್ರತಿಭೆಗಳು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲ್ಲುವ ಮೂಲಕ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಬಿಸಲವಾಡಿ ಗ್ರಾಮದ ಯುವಕರು ಸಹ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕ ಎಂದು ಸಲಹೆ ನೀಡಿದರು.

ಯುವಕರು ಶಿಕ್ಷಣಕ್ಕೆ ನೀಡುವಷ್ಟೆ ಪ್ರಾಮುಖ್ಯತೆಯನ್ನು ಕ್ರೀಡೆಗಳಿಗೂ ನೀಡಬೇಕು. ಕ್ರೀಡೆಗಳಲ್ಲಿ ಭಾಗವಹಿಸುವಿಕೆಯಿಂದ ಓದಿನಲ್ಲೂ ಆಸಕ್ತಿ ಹೆಚ್ಚಾಗುವಂತೆ ಮಾಡುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಕ್ರೀಡಾ ಖೋಟಾದಡಿ ಉದ್ಯೋಗ ಮೀಸಲಾತಿ ಪಡೆದು ಬದುಕು ರೂಪಿಸಿಕೊಳ್ಳಬಹುದು ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳ ನೇಮಕಾತಿಯಲ್ಲೂ ಕ್ರೀಡಾ ವಿಶೇಷ ಕೋಟಾ ಮೀಸಲಾತಿ ಸೌಲಭ್ಯ ದೊರೆಯುತ್ತದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿಗೆಳನ್ನು ಗೆಲ್ಲಬೇಕು ಎಂದರು.

ಇದೇ ಸಂದರ್ಭದಲ್ಲಿ ಪ್ಯಾರಾ ಒಲಂಪಿಕ್ಸ್ ಕಮ್ಯೂನಿಟಿ ಆಫ್ ಇಂಡಿಯಾ ಉದ್ದ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಬಿಸಲವಾಡಿ ಗ್ರಾಮದ ಮನು ಅವರನ್ನು ಶಾಸಕರು ಸನ್ಮಾನಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಬಿಸಲವಾಡಿ ರವಿ, ಮುಖಂಡರಾದ ಸಿ.ಮಹದೇವಪ್ಪ, ರಮ್ಯಾ ನಾಗರಾಜು, ಕುಮಾರ್, ನಾಗರತ್ನಮ್ಮ, ನಾರಾಯಣ ನಾಯಕ, ಗೀತಾ ಚನ್ನಬಸಪ್ಪ, ನಾಗಮ್ಮ, ಶಿವಣ್ಣ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಶಿವಸ್ವಾಮಿ, ಸದಸ್ಯರಾದ ಮಂಜುನಾಥ್, ಉಮೇಶ್, ಶಿವಕುಮಾರ್, ಸಿದ್ದಶೆಟ್ಟಿ, ಬಸವಣ್ಣ, ನಾಗರಾಜು, ಮಾಜಿ ಅಧ್ಯಕ್ಷರಾದ ಸಿದ್ದನಾಯಕ, ಶಿವಕುಮಾರ್, ಮಹದೇವಯ್ಯ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.