ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | 5,744 ಚಿಣ್ಣರಿಗೆ ಲಸಿಕೆ: ಶೇ 98 ಗುರಿ ಸಾಧನೆ

Published 3 ಮಾರ್ಚ್ 2024, 15:23 IST
Last Updated 3 ಮಾರ್ಚ್ 2024, 15:23 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ 5,856 ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ಗುರಿ ಹೊಂದಲಾಗಿದ್ದು, 5,744 ಮಕ್ಕಳಿಗೆ ಹನಿ ಮದ್ದು ಹಾಕಿ ಶೇ 98 ಗುರಿ ಸಾಧಿಸಲಾಗಿದೆ. ಪೋಷಕರು ಉತ್ತಮ ಸಹಕಾರ ನೀಡಿದ್ದಾರೆ ಎಂದು ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಧರ್ ಹೇಳಿದರು.

ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಭಾನುವಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

28 ಗ್ರಾಮಾಂತರ ಪ್ರದೇಶಗಳ ಅಂಗನವಾಡಿ, ಪಟ್ಟಣದ 3, ಬಸ್ ನಿಲ್ದಾಣ ಸೇರಿದಂತೆ, ಬೂತ್ ತೆರೆಯಲಾಗಿದೆ. ಒಂದು ಬೂತ್ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ನರ್ಸ್ ಸೇರಿ 13 ಜನರನ್ನು ನಿಯೋಜಿಸಿ ಲಸಿಕಾ ಅಭಿಯಾನ ಪೂರ್ಣಗೊಳಿಸಲಾಗಿದೆ ಎಂದರು.

ಮುಂದಿನ 2 ದಿನಗಳ ಕಾಲ ಲಸಿಕೆ ಹಾಕಿಸದ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಲು ಯೋಜನೆ ರೂಪಿಸಲಾಗಿದೆ. ಕಬ್ಬಿನ ಕಟಾವು ಮಾಡುವ ಅನ್ಯ ಜಿಲ್ಲೆಗಳ ಪೋಷಕರು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಹನಿ ಹಾಕಿಸಲು ಮುಂದೆ ಬರಬೇಕು ಎಂದು ಹೇಳಿದರು.

ಶುಶ್ರೂಷಕಿ ಮಧುರಾ ಮಾತನಾಡಿ, ಮಗುವಿಗೆ ಪೋಲಿಯೊ ಹನಿ ಹಾಕಿಸುವುದರಿಂದ ದೇಹದಲ್ಲಿ ಪೋಲಿಯೋ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ಬರುತ್ತದೆ. ವೈರಸ್ ಶರೀರದ ಮೇಲೆ ದಾಳಿ ಮಾಡಲು ಬಿಡುವುದಿಲ್ಲ. ಹಿಂದಿನ ವರ್ಷಗಳಲ್ಲಿ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಈಗ ತಪ್ಪದೆ ಹಾಕಿಸಿ. 2 ದಿನಗಳಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ತೆರಳಿ ಮಕ್ಕಳಿಗೆ ಹನಿ ಹಾಕುತ್ತಾರೆ ಎಂದರು.

ಆರೋಗ್ಯ ಮೇಲ್ವಿಚಾರಕ ಸೋಮಣ್ಣ, ಯೋಗೀಶ್, ಶೀತಲ್, ಪುಟ್ಟು ಹಾಗೂ ಆಶಾ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT