ಬ್ರಿಸ್ಬೇನ್: ಅಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಐದು ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ತಾರಾ ಆಟಗಾರ ಜೋ ರೂಟ್ ಸಿಡಿಸಿದ ಶತಕ ನೆರವಾಯಿತು. ಅವರ ಅಜೇಯ 138 ರನ್ ನೆರವಿನಿಂದ ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್ನಲ್ಲಿ 334/10 ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಅವರು ಶತಕ ಸಿಡಿಸುತ್ತಿದ್ದಂತೆ ಆಸ್ಟ್ರೇಲಿಯಾ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಅವರ ಹೇಳಿಕೆಯೊಂದು ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡಿದ್ದ ಹೇಡನ್, ‘ಜೋ ರೂಟ್ ಅವರು ಈ ಬಾರಿಯ ಆ್ಯಷಸ್ ಸರಣಿಯಲ್ಲಿ ಶತಕ ಸಿಡಿಸದಿದ್ದರೆ, ತಾವು ಬೆತ್ತಲೆಯಾಗಿ ಮೆಲ್ಬರ್ನ್ ಅಂಗಳದಲ್ಲಿ ಓಡಾಡುತ್ತೇನೆ’ ಎಂದು ಹೇಳಿದ್ದರು.
.ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಶತಕ ಸಿಡಿಸಿದ ರೂಟ್: ಸ್ಮಿತ್ ದಾಖಲೆ ಮುರಿದ ಜೋ.
ಸದ್ಯ, ಜೋ ರೂಟ್ ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲೇ ಶತಕ ಸಿಡಿಸಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಜೋ ರೂಟ್ ಅವರು, ಆಸ್ಟ್ರೇಲಿಯಾ ದಿಗ್ಗಜ ಹೇಡನ್ ಅವರ ಮಾನ ಕಾಪಾಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ರೂಟ್ಗೆ ಧನ್ಯವಾದ ತಿಳಿಸಿದ ಹೇಡನ್ ಮಗಳು

ಜೋ ರೂಟ್ ಬ್ರಿಸ್ಬೇನ್ನಲ್ಲಿ ಶತಕ ಸಿಡಿಸುತ್ತಿದ್ದಂತೆ ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿರುವ ಮ್ಯಾಥ್ಯೂ ಹೇಡನ್ ಅವರ ಮಗಳು ಗ್ರೇಸ್ ಹೇಡನ್, ‘ನಮ್ಮೆಲ್ಲರ ಕಣ್ಣುಗಳನ್ನು ಉಳಿಸಿದ್ದಕ್ಕಾಗಿ ಜೋ ರೂಟ್ ನಿಮಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
.ಆ್ಯಷಸ್ ಟೆಸ್ಟ್: ಈ ಹೆಸರು ಬರಲು ಕಾರಣವೇನು? ಇಲ್ಲಿದೆ ಅಸಲಿ ಸತ್ಯ.
ಸದ್ಯ, ಬ್ರಿಸ್ಬೇನ್ ಮೈದಾನದಲ್ಲಿ ಜೋ ರೂಟ್ ಸಿಡಿಸಿರುವ ಶತಕ ಅವರ ಟೆಸ್ಟ್ ವೃತ್ತಿ ಜೀವನದ 40ನೇ ಶತಕವಾಗಿದೆ. ಆ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದವರ ಸಾಲಿನಲ್ಲಿ ರಿಕಿ ಪಾಂಟಿಂಗ್, ಜಾಕ್ ಕಾಲಿಸ್ ಹಾಗೂ ಸಚಿನ್ ತೆಂಡೂಲ್ಕರ್ ನಂತರದ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.