ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ 52.16 ರಷ್ಟು ‘ಕಿಸಾನ್‌ ಸಮ್ಮಾನ್‌’ ಪ್ರಗತಿ

ಯೋಜನೆ ಜಾರಿಗೆ ಬಂದು ಬರೋಬರಿ ಒಂದು ವರ್ಷ ಕಳೆದರೂ ಇನ್ನೂ ಯೋಜನೆಯಿಂದ ಹೊರಗುಳಿದ ಶೇ 47.83 ರಷ್ಟು ರೈತರು, ಈವರೆಗೆ ಜಿಲ್ಲೆಗೆ ₹38.91 ಕೋಟಿ ಸಹಾಯಧನ ಪಾವತಿ
Last Updated 15 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ಜಾರಿಗೆ ತಂದ ‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ (ಪಿಎಂ–ಕಿಸಾನ್‌) ಯೋಜನೆ ಜಾರಿಗೆ ಬಂದು ಭರ್ತಿ ಒಂದು ವರ್ಷ ಪೂರೈಸಿದೆ. ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಶೇ52.16 ರಷ್ಟು ಈ ಯೋಜನೆಯ ಪ್ರಗತಿಯಾಗಿದೆ. ಇನ್ನೂ ಶೇ 47.83 ರಷ್ಟು ರೈತರು ‘ಕಿಸಾನ್‌ ಸಮ್ಮಾನ್‌’ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದು ಬಾಕಿ ಇದೆ.

2018ರ ಡಿಸೆಂಬರ್‌ 1ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಅಡಿ ಕೇಂದ್ರವು ರೈತರ ಖಾತೆಗಳಿಗೆ ವರ್ಷದಲ್ಲಿ ₹2,000 ದಂತೆ ಮೂರು ಸಮಾನ ಕಂತುಗಳಲ್ಲಿ ತಲಾ ₹ 6,000 ಸಹಾಯಧನ ರೈತರ ಖಾತೆಗಳಿಗೆ ಜಮೆ ಮಾಡುತ್ತದೆ. ಕಳೆದ ಜುಲೈನಲ್ಲಿ ರಾಜ್ಯ ಸರ್ಕಾರವೂ ಈ ಯೋಜನೆ ಅಡಿ ರೈತರಿಗೆ ವಾರ್ಷಿಕ ₹4,000 ನೀಡುವುದಾಗಿ ಘೋಷಿಸಿದೆ.

ಕಳೆದ ಡಿಸೆಂಬರ್‌ನಿಂದ ಈವರೆಗೆ ಜಿಲ್ಲೆಯ 1.11 ಲಕ್ಷ ರೈತರಿಗೆ ಪಿಎಂ–ಕಿಸಾನ್‌ ಯೋಜನೆ ಅಡಿ ಮೂರು ಕಂತುಗಳಲ್ಲಿ ಒಟ್ಟು ₹38.91 ಕೋಟಿ ಸಹಾಯಧನ ಜಮೆಯಾಗಿದೆ. ಈ ಪೈಕಿ ಕೇಂದ್ರ ಸರ್ಕಾರ ₹26.75 ಕೋಟಿ ವರ್ಗಾವಣೆ ಮಾಡಿದರೆ, ರಾಜ್ಯ ಸರ್ಕಾರ 60,842 ರೈತರ ಖಾತೆಗಳಿಗೆ ₹12.16 ಕೋಟಿ ವರ್ಗಾವಣೆ ಮಾಡಿದೆ.

ಜಿಲ್ಲೆಯಲ್ಲಿ ಸುಮಾರು 2.14 ಲಕ್ಷ ರೈತರು ಇದ್ದಾರೆ. ಈ ಪೈಕಿ 1.11 ಲಕ್ಷ ರೈತರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ 1.02 ಲಕ್ಷ ರೈತರು ಪಿಎಂ–ಕಿಸಾನ್‌ ಯೋಜನೆಯಿಂದ ಹೊರಗುಳಿದಿದ್ದಾರೆ. 31,478 ರೈತರು ಸಹಾಯಧನ ಪಡೆಯಲು ಯೋಜನೆಯ ಮಾನದಂಡದ ಅನ್ವಯ ಸಮರ್ಪಕ ದಾಖಲೆಗಳನ್ನು ಒದಗಿಸಬೇಕಿದೆ.

‘ಈವರೆಗೆ ಜಿಲ್ಲೆಯಲ್ಲಿ ಪಿಎಂ–ಕಿಸಾನ್‌ ಯೋಜನೆ ಅಡಿ ಮೊದಲ ಕಂತಿನಲ್ಲಿ 1.01ಲಕ್ಷ ರೈತರಿಗೆ ₹20.30 ಕೋಟಿ, ಎರಡನೇ ಕಂತಿನಲ್ಲಿ ಸುಮಾರು 77 ಸಾವಿರ ರೈತರಿಗೆ ₹15.41 ಕೋಟಿ ಮತ್ತು ಮೂರನೇ ಕಂತಿನಲ್ಲಿ ಸುಮಾರು 15 ಸಾವಿರ ರೈತರಿಗೆ ₹3.19 ಕೋಟಿ ಪಾವತಿಯಾಗಿದೆ. ಬಾಕಿ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಿ, ಜಿಲ್ಲೆಯಲ್ಲಿ ನೂರಕ್ಕೆ ನೂರರಷ್ಟು ಸಾಧನೆ ಮಾಡಲಾಗುವುದು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪಾ ತಿಳಿಸಿದರು.

‘ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಹೆಸರು ನೋಂದಾಯಿಸಿಕೊಂಡು ಯೋಜನೆಯ ಲಾಭ ಪಡೆಯಬಹುದು. ಈಗಾಗಲೇ ನೋಂದಾಯಿಸಿಕೊಂಡ ರೈತರು ನೋಂದಣಿಯಲ್ಲಿ ಏನಾದರೂ ಬದಲಾವಣೆಗಳಿದ್ದರೆ ಅದನ್ನೂ ಇದೇ ಕೇಂದ್ರಗಳಲ್ಲಿ ಮಾಡಬಹುದು. ವಿಳಾಸ, ನಾಮ ನಿರ್ದೇಶಿತರ ಬದಲಾವಣೆಯನ್ನೂ ಇದೇ ಕೇಂದ್ರಗಳಲ್ಲಿ ಮಾಡಿಸಬಹುದು’ ಎಂದು ಹೇಳಿದರು.

ಜಿಲ್ಲೆಯ ‘ಕಿಸಾನ್‌ ಸಮ್ಮಾನ್‌’ ಯೋಜನೆಯ ಒಟ್ಟಾರೆ ಚಿತ್ರಣದ ವಿವರ

ತಾಲ್ಲೂಕು ಗುರಿ ಘೋಷಣೆ ಅರ್ಹವಲ್ಲದ ರೈತರು ಮರಣ ಪ್ರಕರಣಗಳು ದಾಖಲೆಗಳ ಕೊರತೆ ಬಾಕಿ
ಗೌರಿಬಿದನೂರು 51,693 25,615 1,899 16,652 7,527 26,078
ಚಿಂತಾಮಣಿ 46,862 23,752 2,542 14,540 6,028 23,110
ಬಾಗೇಪಲ್ಲಿ 40,050 17,264 1,284 14,946 6,556 22,786
ಚಿಕ್ಕಬಳ್ಳಾಪುರ 35,792 18,624 853 11,584 4,731 17,168
ಶಿಡ್ಲಘಟ್ಟ 24,766 19,294 733 3,931 808 5472
ಗುಡಿಬಂಡೆ 15,299 7,329 292 1,849 5,829 7,970


***
ತಾಲ್ಲೂಕುವಾರು ‘ಕಿಸಾನ್‌ ಸಮ್ಮಾನ್‌’ ಯೋಜನೆ ಸಹಾಯಧನ ಪಡೆದ ರೈತರ ವಿವರ
ತಾಲ್ಲೂಕು ಮೊದಲ ಕಂತು ಎರಡನೇ ಕಂತು ಮೂರನೇ ಕಂತು
ಗೌರಿಬಿದನೂರು 23,688 17,246 5,084
ಚಿಂತಾಮಣಿ 21,212 17,492 2,392
ಶಿಡ್ಲಘಟ್ಟ 18,124 13,535 4,202
ಚಿಕ್ಕಬಳ್ಳಾಪುರ 16,650 11,791 1,006
ಬಾಗೇಪಲ್ಲಿ 15,124 11,524 1,131
ಗುಡಿಬಂಡೆ 6,748 5,477 2,139

ಅಂಕಿ ಅಂಶಗಳು

ಜಿಲ್ಲೆಯಲ್ಲಿ ಕಿಸಾನ್ ಸಮ್ಮಾನ್ ಚಿತ್ರಣ

2,14,462 – ಒಟ್ಟು ಗುರಿ

1,11,878 – ಘೋಷಣೆ

7,603–ಅರ್ಹವಲ್ಲದ ರೈರು

63,503 – ಮರಣ ಪ್ರಕರಣಗಳು

31,478–ಅಸಮರ್ಪಕ ದಾಖಲೆ ಪ್ರಕರಣಗಳು

1,02,584 – ಬಾಕಿ

₹38.91 ಕೋಟಿ – ಸಂದಾಯವಾದ ಸಹಾಯಧನ

₹26.75 ಕೋಟಿ – ಕೇಂದ್ರ ಸರ್ಕಾರದ ಪಾಲು

₹12.16 ಕೋಟಿ –ರಾಜ್ಯ ಸರ್ಕಾರದ ಪಾಲು

1,01,546 – ಮೊದಲ ಕಂತು ಪಡೆದ ರೈತರು

77,065 –ಎರಡನೇ ಕಂತು ಪಡೆದ ರೈತರು

15,954 – ಮೂರನೇ ಕಂತು ಪಡೆದ ರೈತರು

60,842 –ರಾಜ್ಯ ಸರ್ಕಾರದ ನೆರವು ರೈತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT