ಗುಡಿಬಂಡೆ: ತಾಲ್ಲೂಕಿನ ಲಗುಮೇನಹಳ್ಳಿ ಗ್ರಾಮದ ರಸ್ತೆ ಬದಿ ಖಾಲಿ ನಿವೇಶನದ ನೀರಿನ ಗುಂಡಿಗೆ ಕಾಲು ಜಾರಿ ಬಿದ್ದ ನಾಲ್ಕು ವರ್ಷದ ಮಗು ಮೃತಪಟ್ಟಿದೆ.

ಹಳೇಗುಡಿಬಂಡೆ ಗ್ರಾಮದ ನರಸಿಂಹಮೂರ್ತಿ ಎಂಬುವರ ಮಗ ಅರ್ಷಿತ್ ರೆಡ್ಡಿ (4) ಮೃತಪಟ್ಟ ಮಗು.

ಸಂಬಂಧಿಕರ ಜಮೀನಿನಲ್ಲಿ ಜೋಳ ಬಿತ್ತನೆಗೆ ನರಸಿಂಹಮೂರ್ತಿ ಅವರು ತಮ್ಮ ಜೊತೆ ಮಗುವನ್ನು ಕರೆದೊಯ್ದಿದ್ದರು. ಮಗು ಆಟವಾಡುತ್ತಾ, ಹೋಗಿ ನೀರಿನ ಗುಂಡಿಗೆ ಬಿದ್ದಿದೆ. ಜೋಳ ಬಿತ್ತನೆಯಲ್ಲಿ ತೊಡಗಿದ್ದ ಮಗುವಿನ ತಂದೆಗೆ ಈ ವಿಚಾರ ಗೊತ್ತಾಗಿಲ್ಲ. ಕೆಲಸ ಮುಗಿದ ಬಳಿಕ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಎಲ್ಲೂ ಸಿಗದಿದ್ದಾಗ, ನೀರಿನ ಗುಣಿಯಲ್ಲಿ ಹುಡುಕಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ. ಗುಡಿಬಂಡೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮಗುವಿನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಮಗುವಿನ ತಾಯಿ ಭಾಗ್ಯಮ್ಮ ನೀಡಿದ ದೂರಿನ ಮೇರೆಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.