ಗೌರಿಬಿದನೂರು: ತಾಲ್ಲೂಕಿನ ಅಲಕಾಪುರ ಚನ್ನಸೋಮೇಶ್ವರ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ಶಿವಗಂಗೆ ಕ್ಷೇತ್ರ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠದ ಡಾ.ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ರಥೋತ್ಸವಕ್ಕೆ ಚಾಲನೆ ನೀಡಿದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆಧುನಿಕ ಜಗತ್ತಿನಲ್ಲಿ ಒತ್ತಡದ ಜೀವನ ಸಾಗಿಸುವಂತಾಗಿದೆ. ಜೀವನದಲ್ಲಿ ಶಾಂತಿ, ನೆಮ್ಮದಿ ಲಭಿಸಲು ಹಾಗೂ ಲೋಕ ಕಲ್ಯಾಣಕ್ಕಾಗಿ ಜಾತ್ರಾ ಮಹೋತ್ಸವ ಹೆಚ್ಚು ಸಹಕಾರಿ ಎಂದರು.

ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ಜಾತ್ರಾ ಮಹೋತ್ಸವ ಸಮಾಜದ ಸೌಹಾರ್ದತೆಯ ಸಂಕೇತ. ಹಿರಿಯರು ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿದ್ದು ಅವರ ಆದರ್ಶಗಳನ್ನು ಶ್ರದ್ಧಾ-ಭಕ್ತಿಯಿಂದ ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ದೇವರ ಆರಾಧನೆಯಿಂದ ಸಮಾಜದಲ್ಲಿ ಶಾಂತಿ ಮೂಡಲು ಸಹಕಾರಿ ಎಂದು ತಿಳಿಸಿದರು.

ರಥೋತ್ಸವಕ್ಕೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ದೇವಸ್ಥಾನ ಆಡಳಿತ ಮಂಡಳಿ, ವೀರಶೈವ ಲಿಂಗಾಯಿತ ದಾಸೋಹ ಸೇವಾ ಸಮಿತಿ ಮತ್ತು ಆರ್ಯ ವೈಶ್ಯ ಮಂಡಳಿಯಿಂದ ಅನ್ನ ದಾಸೋಹ ನಡೆಯಿತು.

ತಹಶೀಲ್ದಾರ್ ಕೆ.ಎಂ.ಅರವಿಂದ್, ಇಒ ಜಿ.ಕೆ.ಹೊನ್ನಯ್ಯ, ವಿ.ಅರವಿಂದ್, ಟಿ.ಚಿಕ್ಕಣ್ಣ, ಚಿದಾನಂದ ಮೂರ್ತಿ, ಅಬ್ಬಿಗೆರೆ ಮನೋಹರ್, ಜಿ.ರಾಜಣ್ಣ, ಮಹೇಶ್, ಬಸವರಾಜು, ಟಿ.ವಿ.ಮಹೇಂದ್ರ ಕುಮಾರ್, ಜೆ.ಕಾಂತರಾಜು, ಆರ್.ಆಶೋಕ್ ಕುಮಾರ್, ಬಿ.ವಿ.ಗಂಗಾಧರ ಆರಾದ್ಯ, ದೇವಿಮಂಜುನಾಥ್, ಜಯಣ್ಣ, ಹರೀಶ್, ಯತೀಶ, ರಾಜೇಂದ್ರ, ಆರ್.ಮಂಜುನಾಥ್, ಎನ್.ಆರ್.ರವಿಕುಮಾರ್, ಗಂಗಾಧರ್, ಶಿವಶಂಕರ್ ಆರಾಧ್ಯ, ನಟರಾಜ್, ಮೋಹನ್, ಮಲ್ಲಿಕಾರ್ಜುನಯ್ಯ, ಶಿವಶಂಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.