ಶುಕ್ರವಾರ, ಜನವರಿ 22, 2021
19 °C

ಗೌರಿಬಿದನೂರು: ಕೌಟುಂಬಿಕ ಕಲಹ ಹಿನ್ನೆಲೆ, ತಮ್ಮನಿಂದಲೇ ಅಣ್ಣನ ಬರ್ಬರ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಗೌರಿಬಿದನೂರು: ತಾಲ್ಲೂಕಿನ ಮೇಲಿನ ಕುರುಬರಹಳ್ಳಿಯಲ್ಲಿ ಕೌಟುಂಬಿಕ ಕಲಹದಿಂದ ಮಂಗಳವಾರ ರಾತ್ರಿ ತಮ್ಮ ಅಣ್ಣನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ರಮೇಶ್ (36) ಕೊಲೆಯಾದ ವ್ಯಕ್ತಿ, ಮನೆ ಪಾಯದ ವಿಚಾರದಲ್ಲಿ ಸೋದರರಿಬ್ಬರಿಗೂ ಮಂಗಳವಾರ ಗಲಾಟೆಯಾಗಿದ್ದು, ರಾತ್ರಿ ಇಬ್ಬರೂ ಮನೆಯಲ್ಲೆ ಮಲಗಿದ್ದಾರೆ. ಈ ಸಮಯವನ್ನು ಹೊಂಚು ಹಾಕಿ ತಮ್ಮ ಸುರೇಶ ಮಾರಕಾಸ್ತ್ರದಿಂದ ಅಣ್ಣ ರಮೇಶನ ಕತ್ತನ್ನು ಕೊಯ್ದು ಯಾರಿಗೂ ಅನುಮಾನ ಬರದಂತೆ ಮನೆಯಲ್ಲೆ ಮಲಗಿದ್ದಾನೆ.

ಬುಧವಾರ ಬೆಳಿಗ್ಗೆ ಅಣ್ಣ ಶವವಾಗಿದ್ದನು. ಸಂಬಂಧಿಕರು ಕೂಡಲೇ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ತಮ್ಮ ಸುರೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಣ್ಣ ರಮೇಶ್‌ನನ್ನು ಹತ್ಯೆ ಮಾಡಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು