ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಚಿತ್ರಾವತಿ ಕೆಳಸೇತುವೆಗೆ ಕಲುಷಿತ ನೀರು ಹರಿಸಿರುವುದು
ಗುಂಡಿಗಳು ರಸ್ತೆ ಮಧ್ಯೆ ಕಾಲುವೆಯಂತೆ ಅಗೆಯಲಾಗಿದೆ. ವಾಹನಗಳಲ್ಲಿ ಸಂಚರಿಸಲು ಜನರು ನಡೆದಾಡಲು ತೊಂದರೆ ಆಗಿದೆ. ಅಗೆದ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿಲ್ಲ. ಪಟ್ಟಣದಲ್ಲಿನ ಒಳಚರಂಡಿ ಕಾಮಗಾರಿಗೆ ₹35 ಕೋಟಿ ಹೆಚ್ಚುವರಿ ಅನುದಾನ ನೀಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸ ಆಗಿಲ್ಲ
ಕೆ.ಎ. ಶ್ರೀನಾಥ್ ಪುರಸಭೆ ಸದಸ್ಯ

ದ್ವಿಚಕ್ರ ವಾಹನ ಸವಾರರು ಸರ್ಕಸ್ ಮಾಡುವಂತಾಗಿದೆ. ಮಹಿಳೆಯರು ಮಕ್ಕಳು ವೃದ್ಧರು ಸಂಚರಿಸಲು ಆಗುತ್ತಿಲ್ಲ. ಒಳಚರಂಡಿ ಕಾಮಗಾರಿ ನೆಪದಲ್ಲಿ ರಸ್ತೆಗಳು ಗುಂಡಿಗಳನ್ನು ಅಗೆದು ಜನರು ಸಂಚರಿಸದಂತೆ ಮಾಡಲಾಗಿದೆ. ಗುಂಡಿಗಳು ಮತ್ತು ರಸ್ತೆಗಳನ್ನು ಸಮರ್ಪಕವಾಗಿ ಮುಚ್ಚಿಲ್ಲ.
ರಾಜು ವಾಲ್ಮೀಕಿ ನಗರದ ನಿವಾಸಿ
ಪಟ್ಟಣದ ಒಳಚರಂಡಿ ಕಾಮಗಾರಿಯನ್ನು 5 ಮಂದಿ ಗುತ್ತಿಗೆದಾರರು ಮಾಡಿದ್ದಾರೆ. ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಬಿಲ್ ಮಾಡಲಾಗಿದೆ. ಕೆಲವು ಗುತ್ತಿಗೆದಾರರು ಕಮಿಷನ್ ಪಡೆದು ಕೆಲಸ ಮಾಡಿಲ್ಲ. ಒಳಚರಂಡಿ ಮಂಡಲಿಯ ಅಧಿಕಾರಿಗಳು ಸಹ ಕಮಿಷನ್ ಪಡೆದು ಕೆಲಸ ಮಾಡಿಸಿಲ್ಲ