ಪಟ್ಟಣದ ಡಾ.ಎಚ್.ಎನ್.ವೃತ್ತದಿಂದ ನ್ಯಾಷನಲ್ ಕಾಲೇಜಿಗೆ ಕಡೆಯ ಮುಖ್ಯರಸ್ತೆಯಲ್ಲಿ ಪಟ್ಟಣದ ಸಂತೋಷ್ ನಾಯಕ್ ಎಂಬ ಯುವಕ ಬೈಕ್ ವ್ಹೀಲಿ ಮಾಡಿದ್ದಾರೆ. ಪೊಲೀಸರಿಗೆ ಖಚಿತ ಮಾಹಿತಿಯಂತೆ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ ನೇತೃತ್ವದ ಪೊಲೀಸ್ ತಂಡ ದಾಳಿ ಮಾಡಿ ಯುವಕ ಸಂತೋಷ್ ನಾಯಕ್ ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆದಿದ್ದಾರೆ.