ಚಿಂತಾಮಣಿ: ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳ ಬಳಗ ಹಾಗೂ ಲಯನ್ಸ್ ಕ್ಲಬ್ ಅಫ್ ಚಿಂತಾಮಣಿ ಆಶ್ರಯದಲ್ಲಿ ಶನಿವಾರ ನಗರದ ವಿದ್ಯಾಗಣಪತಿ ರಂಗಮಂದಿರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 97 ಯುನಿಟ್ ರಕ್ತ ಸಂಗ್ರಹವಾಯಿತು.

ನರೇಂದ್ರ ಮೋದಿ ಅಭಿಮಾನಿಗಳ ಬಳಗದ ಪಿ.ವಿ ಸುನೀಲ್ ಮಾತನಾಡಿ, ನರೇಂದ್ರ ಮೋದಿ ಹೆಸರಿನಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಹೆಚ್ಚು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು.

ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ತಾಲ್ಲೂಕು ಕಾರ್ಯದರ್ಶಿ ನಾರಾಯಣರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ರಕ್ತ ಸಂಗ್ರಹಣೆ ಆಗುವುದು ಚಿಂತಾಮಣಿ ತಾಲ್ಲೂಕಿನಲ್ಲಿ. ಹಾಗೆಯೇ ರಕ್ತದ ಬೇಡಿಕೆಯು ತಾಲ್ಲೂಕಿನಲ್ಲಿ ಹೆಚ್ಚಾಗಿದೆ. ಶಿಬಿರದಲ್ಲಿ ಸುಮಾರು 50 ಯುನಿಟ್ ರಕ್ತ ಸಂಗ್ರಹಣೆ ನಿರೀಕ್ಷೆ ಇತ್ತು. ನಿರೀಕ್ಷೆಯ ಎರಡು ಪಟ್ಟು ಸಂಗ್ರಹಣೆಯಾಗಿರುವುದು ಆಯೋಜಕರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದರು.

ಕುರುಟಹಳ್ಳಿ ಮಂಜುನಾಥ್, ಮಾಡಿಕೆರಿ ಅರುಣ್, ಶಿವಾರೆಡ್ಡಿ, ಅಂಜನೇಯರೆಡ್ಡಿ, ಕೊತ್ತೂರು ನರಸಿಂಹಮೂರ್ತಿ, ಎನ್. ಶ್ರೀನಿವಾಸರೆಡ್ಡಿ, ಲಯನ್ಸ್ ಕ್ಲಬ್ನ ಬೂಸ ರಾಜೇಶ್, ಶರತ್, ವಿಕಾಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.