ತೊಂಡೇಬಾವಿ ಬಳಿ ನಿರ್ಮಿಸಿರುವ ತಂಗುದಾಣ ಕೇಂದ್ರ ಸ್ಥಾನದಿಂದ ದೂರದಲ್ಲಿದೆ. ಅಲ್ಲಿ ಯಾವುದೇ ಬಸ್ ನಿಲ್ಲಿಸುವುದಿಲ್ಲ. ಅಲ್ಲಿಗೆ ಯಾವುದೇ ಪ್ರಯಾಣಿಕರು ಹೋಗುವುದಿಲ್ಲ. ಈಗ ತ್ಯಾಜ್ಯ ಎಸೆಯುವ ಸ್ಥಳವಾಗಿದೆ. -ಸಂದೀಪ್ ತೊಂಡೇಬಾವಿ
ಪಾಳು ಬೀಳುತ್ತಿವೆ
ಅಧಿಕಾರಿಗಳು ಬಹುತೇಕ ಕಡೆಗಳಲ್ಲಿ ಸರಿಯಾದ ಜಾಗದಲ್ಲಿ ತಂಗುದಾಣ ನಿರ್ಮಾಣ ಮಾಡಿಲ್ಲ. ಪ್ರಯಾಣಿಕರು ತಂಗುದಾಣದ ಕಡೆ ತಲೆ ಕೂಡ ಹಾಕುತ್ತಿಲ್ಲ. ಜನ ಓಡಾಡದ ಮತ್ತು ದೂರದಲ್ಲಿ ನಿರ್ಮಾಣ ಮಾಡಿರುವುದರಿಂದ ತಂಗುದಾಣಗಳು ಪಾಳು ಬೀಳುತ್ತಿವೆ-ಚಿಕ್ಕಣ್ಣ, ತೊಂಡೇಬಾವಿ
ನಿಲ್ದಾಣದಿಂದ ದೂರ
ಕೆಲವು ಗ್ರಾಮಗಳ ಬಳಿ ಬಸ್ ನಿಲ್ದಾಣದಿಂದ 150 ರಿಂದ 200 ಮೀಟರ್ ದೂರದಲ್ಲಿ ತಂಗುದಾಣ ನಿರ್ಮಿಸಲಾಗಿದೆ. ತಂಗುದಾಣಗಳು ಬಳಕೆಯಿಂದ ದೂರ ಉಳಿದಿರುವ ಕಾರಣ ಅವು ಕಸದ ತೊಟ್ಟಿಗಳಾಗಿವೆ. ದೂಮಪಾನ ಮತ್ತು ಮದ್ಯಪಾನ ಮಾಡುವವರು ಇಲ್ಲಿ ಕಾಯಂ ಇರುತ್ತಾರೆ.