ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲೇ ವ್ಯಾಪಾರ: ಸಂಚಾರಕ್ಕೆ ಸಂಕಷ್ಟ

ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಕ್ಕೆ ವ್ಯಾಪಾರಿಗಳ ಹಿಂಜರಿಕೆ
Last Updated 26 ನವೆಂಬರ್ 2021, 2:04 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದ ಟಿ.ಬಿ. ಕ್ರಾಸ್‌ನ ಕೃಷಿ ಉತ್ಪನ್ನ ಮಾರುಕಟ್ಟೆಯು ತರಕಾರಿಗಳ ಮಾರಾಟಕ್ಕೆ ವಿಶಾಲವಾಗಿದ್ದರೂ, ಮುಖ್ಯರಸ್ತೆಯಲ್ಲಿ ತರಕಾರಿಗಳ ಮಾರಾಟ ಹೆಚ್ಚಾಗಿದೆ. ಇದರಿಂದ ವಾಹನ ಹಾಗೂ ಜನರ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ಪಟ್ಟಣದ ಟಿ.ಬಿ. ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿ 7ರ ರಸ್ತೆ ಪಕ್ಕದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಇದೆ.

ತಾಲ್ಲೂಕು ಅಲ್ಲದೇ ಪಕ್ಕದ ಆಂಧ್ರಪ್ರದೇಶದಿಂದ ನೂರಾರು ರೈತರು ಮಾರುಕಟ್ಟೆಗೆ ತರಕಾರಿ ಸಾಗಿಸಿ ಮಾರಾಟ ಮಾಡುತ್ತಿದ್ದಾರೆ. ಟೊಮೆಟೊ, ಕ್ಯಾರೆಟ್, ಬೀಟ್‌ರೋಟ್, ಮೂಲಂಗಿ, ಕೊತ್ತಂಬರಿ, ಪುದೀನಾ ಸೇರಿದಂತೆ ವಿವಿಧ ತರಕಾರಿಗಳನ್ನು ಖರೀದಿ ಮಾಡಲು ಗ್ರಾಹಕರು, ವ್ಯಾಪಾರಸ್ಥರು, ಸಾರ್ವಜನಿಕರು ಆಗಮಿಸುತ್ತಿದ್ದಾರೆ.

ಪಟ್ಟಣದ ಎಪಿಎಂಸಿ ಮಾರುಕಟ್ಟೆ ಯಲ್ಲಿ ತರಕಾರಿ ಮಾರಾಟ ಹಾಗೂ ಖರೀದಿ ಮಾಡಲು ಸ್ಥಳವಿದೆ. ಮಾರುಕಟ್ಟೆಯಲ್ಲಿ ಮಳೆಗೆ ರಸ್ತೆ ಗಳು ಕೆಸರುಗದ್ದೆಯಂತಾಗಿವೆ. ಕೊಳೆತ ತರಕಾರಿಗಳನ್ನು ಎಲ್ಲೆಂದರಲ್ಲಿ ಬೀಸಾಡಿದ್ದಾರೆ. ರಾಶಿಗಟ್ಟಲೇ ತರಕಾರಿಗಳನ್ನು ಹಾಕಿದ್ದಾರೆ. ಆದರೆ, ಕೆಲವರು
ಮಾರುಕಟ್ಟೆಯಲ್ಲಿ ತರಕಾರಿಗಳು ಮಾರಾಟ ಮಾಡದೇ ಮುಖ್ಯರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.

ವಿವಿಧ ಕಡೆಗಳಿಂದ ರೈತರು ತರಕಾರಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಖರೀದಿ ಮಾಡಿರುವ ತರಕಾರಿಗಳನ್ನು ಸಾಗಿಸಲು ವ್ಯಾಪಾರಸ್ಥರು ಆಟೊ, ಸರಕು ಸಾಗಣೆ ವಾಹನ, ಲಾರಿ ಸಮೇತ ಬರುತ್ತಾರೆ. ವಾಹನಗಳನ್ನು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಅಲ್ಲದೇ ತರಕಾರಿಗಳನ್ನು ರಸ್ತೆಬದಿಯಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

‘ಮಾರುಕಟ್ಟೆಯಲ್ಲಿ ವ್ಯಾಪಾರ ಆಗಬೇಕು. ಸಾಕಷ್ಟು ಜಾಗ ಇದ್ದರೂ ರಸ್ತೆಯಲ್ಲಿ ವ್ಯಾಪಾರಸ್ಥರು, ಗ್ರಾಹಕರು ವ್ಯಾಪಾರ ಮಾಡುತ್ತಿದ್ದಾರೆ. ಸಂಬಂಧಪಟ್ಟ ಮಾರುಕಟ್ಟೆಯ ಆಡಳಿತ ಮಂಡಳಿ ಈ ಬಗ್ಗೆ ಗಮನ ಹರಿಸಿಲ್ಲ. ಇದರಿಂದ ಮುಖ್ಯರಸ್ತೆಯಲ್ಲಿ ತರಕಾರಿಗಳ ವ್ಯಾಪಾರವನ್ನು ನಿಲ್ಲಿಸಬೇಕು.
ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದನ್ನು ತಡೆದು ಜನರ ಹಾಗೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ರೈತ ಆನಂದ್ ಮನವಿ ಮಾಡಿದ್ದಾರೆ.

‘ಕೃಷಿ ಉತ್ಪನ್ನ ಮಾರುಕಟ್ಟೆಯ ಮುಂದೆ ಇರುವ ಮುಖ್ಯರಸ್ತೆಯ ಪಾದಚಾರಿ ರಸ್ತೆಯಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಮಾರುಕಟ್ಟೆ ಯಲ್ಲಿ ಸಾಕಷ್ಟು ಜಾಗ ಇದ್ದರೂ ರಸ್ತೆಯಲ್ಲಿ ವ್ಯಾಪಾರ ಮಾಡಿದರೆ ಜನರು ಓಡಾಡುವುದು ಹೇಗೆ? ಜನರು ನಡು ರಸ್ತೆಯಲ್ಲಿ ಸಂಚರಿಸ ಬೇಕಾಗಿದೆ. ಅಂಗೈಯಲ್ಲಿ
ಪ್ರಾಣ ಇಟ್ಟು ಓಡಾಡಬೇಕಾಗಿದೆ. ವಾಹನಗಳ ಅಡ್ಡವಾಗಿ ನಿಲ್ಲಿಸಿರುವುದ ರಿಂದ ಮುಂದೆ ಬರುವ ವಾಹನಗಳು ಗೊತ್ತಿಲ್ಲದೇ ಡಿಕ್ಕಿ ಹೊಡೆದು ಗಾಯಗೊಳ್ಳುತ್ತಿದ್ದಾರೆ. ಮಾರುಕಟ್ಟೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಪೊಲೀಸರು ಗಮನ ಹರಿಸುತ್ತಿಲ್ಲ. ಕೂಡಲೇ ಮುಖ್ಯರಸ್ತೆಯಲ್ಲಿ ನಡೆಯುತ್ತಿ ರುವವ್ಯಾಪಾರವನ್ನು ತೆರವು ಮಾಡಿಸಬೇಕು. ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ರೈತ ಮಹೇಶ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT