ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಅಸ್ತಿತ್ವಕ್ಕೆ ಬಂದು ಒಂದು ವರ್ಷ ದಾಟಿದೆ. ಆದರೆ ಇಂದಿಗೂ ಚಿಮುಲ್ಗೆ ತನ್ನದೇ ಆದ ವೆಬ್ಸೈಟ್ ಹೊಂದಲು ಸಾಧ್ಯವಾಗಿಲ್ಲ.

2024 ಜುಲೈ.23ರಂದು ಬಾಗೇಪಲ್ಲಿಯಲ್ಲಿ ನಡೆದ ಕೋಚಿಮುಲ್ ಆಡಳಿತ ಮಂಡಳಿಯ ವಿಶೇಷ ಸಭೆಯಲ್ಲಿ ಕೋಚಿಮುಲ್ ವಿಭಜನೆಗೆ ತೀರ್ಮಾನಕೈಗೊಳ್ಳಲಾಯಿತು. ಸೆಪ್ಟೆಂಬರ್ನಲ್ಲಿ ಈ ಹಿಂದಿನ ಆದೇಶಗಳನ್ನು ಮತ್ತೆ ಯಥಾವತ್ ಮರುಸ್ಥಾಪಿಸಿ ಸರ್ಕಾರ ಆದೇಶಿಸಿತು. ಮರುಸ್ಥಾಪಿತವಾದ ಕೋಮುಲ್ ಮತ್ತು ಚಿಮುಲ್ಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಪ್ರತ್ಯೇಕ ಆದೇಶ ಸಹ ಹೊರಬಿದ್ದಿತು.

2024ರ ಅಕ್ಟೋಬರ್ನಲ್ಲಿ ಸರ್ಕಾರದಿಂದ ಚಿಮುಲ್ ರಚನೆಗೆ ಅಧಿಕೃತ ಮುದ್ರೆಯೂ ಬಿದ್ದಿತು. ಹೀಗೆ ಚಿಮುಲ್ ರಚನೆಯಾಗಿ ಒಂದು ವರ್ಷ ಪೂರ್ಣವಾಗಿದೆ. ರಚನೆಯಾದ ತಕ್ಷಣವೇ ಉಪವಿಭಾಗಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಯಿತು.

ಕೆಎಂಎಫ್ ವ್ಯಾಪ್ತಿಯ ಬಹುತೇಕ ಹಾಲು ಒಕ್ಕೂಟಗಳು ತಮ್ಮದೇ ಆದ ವೆಬ್ಸೈಟ್ಗಳನ್ನು ಹೊಂದಿವೆ. ಈ ಹಿಂದೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ಅಸ್ತಿತ್ವದಲ್ಲಿ ಇದ್ದ ವೇಳೆ ಕೋಚಿಮುಲ್ ವೆಬ್ಸೈಟ್ ಸಹ ಅಸ್ತಿತ್ವದಲ್ಲಿ ಇತ್ತು. ಯಾವಾಗ ಚಿಮುಲ್ ಅಸ್ತಿತ್ವಕ್ಕೆ ಬಂದಿತೊ ಕೋಚಿಮುಲ್ ವೆಬ್ಸೈಟ್ ಸಹ ಪ್ರತ್ಯೇಕವಾಯಿತು. ಈಗ ಕೋಮುಲ್ (ಕೋಲಾರ ಹಾಲು ಒಕ್ಕೂಟ) ಎನ್ನುವ ವೆಬ್ಸೈಟ್ ಇದೆ.

ಆದರೆ ವೆಬ್ಸೈಟ್ ಇಲ್ಲದ ಕಾರಣ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಮಾಹಿತಿಗಳು ಮಾತ್ರ ಹಾಲು ಉತ್ಪಾದಕರಿಗೆ ಹಾಗೂ ರೈತರಿಗೆ ದೊರೆಯುವುದು ಕಷ್ಟವಾಗಿದೆ.

ವೆಬ್ಸೈಟ್ನಲ್ಲಿ ಏನಿರುತ್ತದೆ: ಯಾವುದೇ ಒಂದು ಒಕ್ಕೂಟದ ವೆಬ್ಸೈಟ್ನಲ್ಲಿ ಆ ಒಕ್ಕೂಟದ ಸ್ಥಾಪನೆ, ಗುಣಮಟ್ಟದ ನೀತಿ, ಗುಣಮಟ್ಟದ ಭರವಸೆ, ಹಾಲು, ಮೊಸರು, ತುಪ್ಪ, ಬೆಣ್ಣೆ, ಹಾಲಿನಪುಡಿ, ಐಸ್ಕ್ರೀಂ, ಸಿಹಿತಿಂಡಿಗಳು, ಆ ಒಕ್ಕೂಟ ವ್ಯಕ್ತಿಯ ಚಟುವಟಿಕೆಗಳು, ಹಾಲಿನ ಡೇರಿಗಳು, ಹಾಲಿನ ಉತ್ಪಾದನೆ, ಹಾಲು ಮತ್ತು ಮೊಸರು ಮಾರಾಟ, ಒಕ್ಕೂಟ ಕೈಗೊಂಡಿರುವ ತರಬೇತಿಗಳು, ಟೆಂಡರ್ಗಳು, ಫೋಟೊ ಗ್ಯಾಲರಿ, ಸಂಪರ್ಕದ ಮಾಹಿತಿ ಹೀಗೆ ಒಕ್ಕೂಟಕ್ಕೆ ಸಂಬಂಧಿಸಿದ ನಾನಾ ಮಾಹಿತಿಗಳು ವೆಬ್ಸೈಟ್ನಲ್ಲಿ ದೊರೆಯುತ್ತವೆ.

ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ 2026ರ ಫೆ.1ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಸಂಬಂಧಿಸಿದ ಕರಡು ಮತದಾರರ ಪಟ್ಟಿ, ಅಂತಿಮ ಮತದಾರರ ಪಟ್ಟಿ ಸೇರಿದಂತೆ ಚುನಾವಣಾ ಬೆಳವಣಿಗೆಗಳನ್ನೂ ವೆಬ್ಸೈಟ್ನಲ್ಲಿ ಪ್ರಕಟಿಸಬೇಕಾಗುತ್ತದೆ.

ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇಲ್ಲದ ಒಕ್ಕೂಟದ ಆಡಳಿತಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಾಹಿತಿ ವೆಬ್ಸೈಟ್ನಲ್ಲಿ ಅಡಕವಾಗಿರುತ್ತದೆ.

ಯಾವುದೇ ಒಂದು ವ್ಯಾಪಾರಿ ಅಥವಾ ವಾಣಿಜ್ಯ ಚಟುವಟಿಕೆಗಳ ಸಂಸ್ಥೆಯ ತನ್ನ ಬ್ರಾಂಡಿಂಗ್ ಮಾಡಿಕೊಳ್ಳಲು, ತನ್ನ ಬೆಳವಣಿಗೆಗಳು, ಮಾರುಕಟ್ಟೆ, ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಲು ಮತ್ತು ಜಾಹೀರಾತು ಕಾರಣದಿಂದ ವೆಬ್ಸೈಟ್ಗಳನ್ನು ಹೊಂದುತ್ತದೆ. ಇಂದಿನ ತಾಂತ್ರಿಕ ಬೆಳವಣಿಗೆಯ ಸಂದರ್ಭದಲ್ಲಿ ಸಣ್ಣ ಪುಟ್ಟ ಸಂಸ್ಥೆಗಳೇ ವೆಬ್ಸೈಟ್ಗಳನ್ನು ಹೊಂದಿರುತ್ತವೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಎಂಟು ತಾಲ್ಲೂಕುಗಳ ವ್ಯಾಪ್ತಿ ಹೊಂದಿರುವ ಮತ್ತು ಬೆಂಗಳೂರಿನಲ್ಲಿಯೂ ಮಾರುಕಟ್ಟೆ ಹೊಂದಿರುವ ಚಿಮುಲ್ ಮಾತ್ರ ವೆಬ್ಸೈಟ್ ಹೊಂದಿಲ್ಲ!

ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು 992 ಡೇರಿಗಳನ್ನು ಹೊಂದಿದ್ದು ಜಿಲ್ಲೆಯಲ್ಲಿ ಚಿಮುಲ್ ಆಡಳಿತ ಮಂಡಳಿಗೆ ಒಟ್ಟು 13 ಕ್ಷೇತ್ರಗಳ ಪುನರ್ವಿಂಗಡಣೆ ಮಾಡಲಾಗಿದೆ. ಸರಾಸರಿ 75ರಿಂದ 80 ಸಂಘಗಳಿಗೆ ಒಂದು ಕ್ಷೇತ್ರ ರೂಪಿಸಲಾಗಿದೆ. ಹೀಗೆ ಚುನಾವಣೆ ಪ್ರಕ್ರಿಯೆಗಳು ಆರಂಭವಾಗಿವೆ. ಈ ಪ್ರಕ್ರಿಯೆಗಳ ಬಗ್ಗೆಯೂ ವೆಬ್ಸೈಟ್ನಲ್ಲಿ ಮಾಹಿತಿ ದೊರೆಯಬೇಕಾಗಿತ್ತು.

ಹೀಗೆ ಹೈನುಗಾರಿಕೆಯಲ್ಲಿ ರಾಜ್ಯದಲ್ಲಿಯೇ ಪ್ರಮುಖ ಜಿಲ್ಲೆ ಎನಿಸಿರುವ ಮತ್ತು ಬೆಂಗಳೂರಿನಲ್ಲಿಯೂ ಮಾರುಕಟ್ಟೆಯನ್ನು ಹೊಂದಿರುವ ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಮಾತ್ರ ವೆಬ್ಸೈಟ್ ಭಾಗ್ಯ ದೊರೆತಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.