ಚಿಕ್ಕಬಳ್ಳಾಪುರ: ಇಲ್ಲಿನ ಜಿಲ್ಲಾ ಕಾರಾಗೃಹದ ವಿಚಾರಣಾಧೀನ ಕೈದಿಗಳು ಕಾರಾಗೃಹದ ಜೈಲರ್, ಸಹಾಯಕ ಜೈಲರ್ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ಸಹಾಯಕ ಜೈಲರ್ ಮಲ್ಲಿಕಾರ್ಜುನಪ್ಪ ಟಿ. ಅವರನ್ನು ಸೋಮವಾರ ಸಂಜೆ ದಾಸ್ತಾನು ಕೊಠಡಿಯಲ್ಲಿ ಕೂಡಿ ಹಾಕಿದ ಕುಖ್ಯಾತ ರೌಡಿ ಬಾಂಬೆ ಸಲೀಂ ಹಾಗೂ ಆತನ ಎಂಟು ಮಂದಿ ಸಹಚರರು ಹಲ್ಲೆ ನಡೆಸಿದ್ದಾರೆ. ಕಾರಾಗೃಹ ಇಲಾಖೆ ಡಿಐಜಿ ಭೇಟಿ ನೀಡಿ ಪರಿಶೀಲಿಸಿದರು.

ಸರ್ಕಾರಿ ಆಸ್ತಿಗೆ ನಷ್ಟ ಮತ್ತು ಕಾರಾಗೃಹದ ಭದ್ರತೆಗೆ ಭಂಗ ಉಂಟು ಮಾಡಿರುವ ಆರೋಪದ ಮೇಲೆ 9 ಮಂದಿ ವಿರುದ್ಧ ಕಾರಾಗೃಹದ ಅಧೀಕ್ಷಕ ಸುನೀಲ್ ಡಿ.ಗಲ್ಲೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ.

ಬಾಗೇಪಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಬಾಂಬೆ ಸಲೀಂ, ಆತನ ಸಹಚರರು ವಿಚಾರಣಾಧೀನ ಕೈದಿಗಳಾಗಿ ಕಾರಾಗೃಹದಲ್ಲಿದ್ದಾರೆ. ಹಲ್ಲೆಯ ಘಟನೆ ನಡೆದ ತಕ್ಷಣ ಕಾರಾಗೃಹದ ಅಧೀಕ್ಷಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.