ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಯ ಆಡಳಿತ ಅವಧಿ 2025ರ ಅಕ್ಟೋಬರ್ಗೆ ಅಂತ್ಯವಾಗಲಿದೆ. ಈಗ ರಾಜಕಾರಣದ ಕೊನೆಯ ಆಟ ಎನ್ನುವಂತೆ ನಗರಸಭೆ ಸ್ಥಾಯಿ ಸಮಿತಿ ರಚನೆಗೆ ಆಡಳಿತ ಪಕ್ಷದಲ್ಲಿ ಮುಸುಕಿನ ಗುದ್ದಾಟ ಜೋರಾಗಿದೆ.

ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಮತ್ತು ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಡಿ.ಎಸ್.ಆನಂದರೆಡ್ಡಿ ಬಾಬು, ತಮ್ಮದೇ ಆದ ರಾಜಕೀಯ ಪಟ್ಟು ಹಾಕಿದ್ದಾರೆ. ಈ ಇಬ್ಬರು ನಾಯಕರು ಪ್ರತ್ಯೇಕವಾಗಿ ಸ್ಥಾಯಿ ಸದಸ್ಯರ ಪಟ್ಟಿಯನ್ನು ಪೌರಾಯುಕ್ತರಿಗೆ ನೀಡಿದ್ದಾರೆ. ಇದು ಈಗ ನಗರಸಭೆಯ ರಾಜಕಾರಣವನ್ನು ರಂಗೇರಿಸಿದೆ.

ಗಜೇಂದ್ರ ನೀಡಿರುವ ಸದಸ್ಯರ ಪಟ್ಟಿಯಲ್ಲಿ ಆನಂದರೆಡ್ಡಿ ಹೆಸರು ಇಲ್ಲ. ಅಧ್ಯಕ್ಷರ ಮತ್ತು ಮಾಜಿ ಅಧ್ಯಕ್ಷರ ಪಟ್ಟಿಯಲ್ಲಿ ಕೆಲವು ಹೆಸರುಗಳು ಎರಡೂ ಕಡೆಯಲ್ಲಿವೆ. ಕೆಲವರ ಹೆಸರನ್ನು ಕೈಬಿಡಲಾಗಿದೆ. ಇನ್ನೇನು ಮೂರು ತಿಂಗಳು ಅಧಿಕಾರದ ಅವಧಿ ಇದೆ ಎನ್ನುವಾಗ ಸ್ಥಾಯಿ ಸಮಿತಿ ರಚನೆಯ ವಿಚಾರವು ತೀವ್ರವಾಗಿದೆ.

ಅಧ್ಯಕ್ಷರ ಪಟ್ಟಿಯಲ್ಲಿರುವ ಸದಸ್ಯರು: ಎಸ್.ಸುಮಾ, ಶಕೀಲಾಬಾನು, ರುಕ್ಮಿಣಿ ಟಿ.ವಿ., ಸತೀಶ್, ದೀಪ ಬಿ.ಕೆ., ವಿ.ಸುಬ್ರಹ್ಮಣ್ಯಾಚಾರಿ, ಆರ್.ಮಂಜುಳಮ್ಮ, ಸಿ.ಜೆ.ಭಾರತಿದೇವಿ, ಎನ್.ಎಸ್.ಚಂದ್ರಶೇಖರ್, ವೆಂಕಟೇಶಪ್ಪ ಸಿ., ಜಯಲಕ್ಷ್ಮಿ ಜಿ.ಕೆ ಅವರ ಹೆಸರು ಎ.ಗಜೇಂದ್ರ ಅವರ ಪಟ್ಟಿಯಲ್ಲಿವೆ.

11 ಜನ ಸದಸ್ಯರನ್ನು ಸರ್ವಾನುಮತದಿಂದ ಅನುಮೋದಿಸಿ ಆಯ್ಕೆ ಮಾಡಲಾಗಿದೆ ಎಂದು ಗಜೇಂದ್ರ ಪೌರಾಯುಕ್ತರಿಗೆ ಪತ್ರದಲ್ಲಿ ತಿಳಿಸಿದ್ದಾರೆ.

ಮಾಜಿ ಅಧ್ಯಕ್ಷರ ಪಟ್ಟಿಯಲ್ಲಿರುವ ಸದಸ್ಯರು: ಡಿ.ಎಸ್.ಆನಂದರೆಡ್ಡಿ ಬಾಬು, ವಿ.ಸುಬ್ರಹ್ಮಣ್ಯಾಚಾರಿ, ಎ.ಬಿ.ಮಂಜುನಾಥ್, ದೀಪ ಬಿ.ಕೆ., ಸತೀಶ್, ಸುಮಾ ಎಸ್., ಅಫ್ಜಲ್, ವೆಂಕಟೇಶಪ್ಪ ಸಿ., ನರಸಿಂಹಮೂರ್ತಿ, ಟಿ.ಜೆ.ಅಂಬರೀಷ್, ಎನ್.ಎಸ್.ಚಂದ್ರಶೇಖರ್.

ಜು.22ರಂದು ನಗರಸಭೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಮತ್ತು ಪೌರಾಯುಕ್ತರ ಸಮ್ಮುಖದಲ್ಲಿ 11 ನಗರಸಭಾ ಸದಸ್ಯರ ಹೆಸರನ್ನು ಎಲ್ಲ ಸದಸ್ಯರು ಒಪ್ಪಿ ಸರ್ವಾನುಮತದಿಂದ ತೀರ್ಮಾನಿಸಿದ್ದಾರೆ. ಈ ಆಯ್ಕೆಯಾದ ಸದಸ್ಯರನ್ನು ಪೌರಾಯುಕ್ತರು ಸಭೆಯಲ್ಲಿ ಓದಿ, ರೆಕಾರ್ಡ್ ಮಾಡಿದ್ದಾರೆ. ಆದರೆ ಇದುವರೆಗೂ ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನು ನೇಮಿಸಿಲ್ಲ. ಆದ್ದರಿಂದ ತಾವು ಕೂಡಲೇ ನಿಯಮಾನುಸಾರ ತುರ್ತಾಗಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ನೇಮಿಸಬೇಕು ಎಂದು ಆನಂದರೆಡ್ಡಿ ಹಾಗೂ ಅವರ ಪಟ್ಟಿಯಲ್ಲಿರುವ ಸದಸ್ಯರು ಕೋರಿದ್ದಾರೆ.

2013ರಿಂದಲೂ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನ ಖಾಲಿ ಇದೆ. ಈ ಹಿಂದೆ ನಡೆದ ನಗರಸಭೆಯ ಹಲವು ಸಾಮಾನ್ಯಸಭೆಗಳಲ್ಲಿ ಸ್ಥಾಯಿ ಸಮಿತಿ ರಚನೆಯ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ.

ನಗರಸಭೆಯ ಅಧಿಕಾರದ ಅವಧಿ ಮೂರು ತಿಂಗಳು ಇರುವುದರಿಂದ ಮುಂದಿನ ದಿನಗಳಲ್ಲಿ ಆಯ್ಕೆ ಆಗುವುದಿಲ್ಲ ಎನ್ನುವ ಮಾತುಗಳು ನಗರಸಭೆಯ ಅಂಗಳದಿಂದ ಕೇಳುತ್ತಿದ್ದವು. ಆದರೆ ಈಗ ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕದ ವಿಚಾರವಾಗಿ ನಗರಸಭೆಯ ವಾತಾವರಣ ಕಾವೇರಿದೆ.

ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರು, ಅಧ್ಯಕ್ಷರಿಗೆ ಸಮಾನ ಎನ್ನುವ ರೀತಿಯಲ್ಲಿಯೇ ಅಧಿಕಾರ ಹೊಂದಿರುವರು. ನೇಮಕದಿಂದ ಸುಗಮ ಆಡಳಿತಕ್ಕೂ ಅವಕಾಶವಾಗುತ್ತದೆ. ಚಿಕ್ಕಬಳ್ಳಾಪುರ ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ತೀವ್ರ ಜಟಾಪಟಿಗಳು ಸಹ ನಡೆದಿವೆ. ಸ್ಥಾಯಿ ಸಮಿತಿಗೆ ಯಾರು ಅಧ್ಯಕ್ಷರಾಗುತ್ತಾರೆ ಎನ್ನುವ ಕುತೂಹಲ ತೀವ್ರವಾಗಿದೆ.

ಅಕ್ಟೋಬರ್ಗೆ ಕೊನೆಯಾಗಲಿದೆ ನಗರಸಭೆ ಅವಧಿ 2013ರಿಂದಲೂ ನಗರಸಭೆ ಸ್ಥಾಯಿ ಸಮಿತಿಗೆ ನೇಮಕವಾಗದ ಅಧ್ಯಕ್ಷ ಯಾರು ಅಧ್ಯಕ್ಷರಾಗುತ್ತಾರೆ ಎನ್ನುವ ಕುತೂಹಲ

‘ಸಾಮಾನ್ಯ ಸಭೆಯಲ್ಲಿ ಚರ್ಚೆಯೇ ಆಗಿಲ್ಲ’ ಜು.22ರಂದು ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆಗೆ ಸಂಬಂಧಿಸಿದಂತೆ ಯಾವುದೇ ಚರ್ಚೆಗಳು ನಡೆದಿಲ್ಲ. ಹೊಸದಾಗಿ ಸಾಮಾನ್ಯ ಸಭೆ ಕರೆಯಲಿ. ಆ ಸಭೆಯಲ್ಲಿ ಎಲ್ಲ ಸದಸ್ಯರ ಜೊತೆ ಚರ್ಚೆಗಳು ನಡೆದ ನಂತರ ಆಯ್ಕೆ ಮಾಡಬೇಕು. ಆದರೆ ಅವರಿಷ್ಟಕ್ಕೆ ಸಂಬಂಧಿಸಿದಂತೆ ಪಟ್ಟಿ ಮಾಡಿದರೆ ಹೇಗೆ ಎಂದು ನಗರಸಭೆ ಸದಸ್ಯ ಮಟಮಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಎರಡೂ ಪಟ್ಟಿಗಳು ಸಹ ಬೋಗಸ್ ಆಗಿವೆ. ಒಣಪ್ರತಿಷ್ಠೆಗಳನ್ನು ಬಿಟ್ಟು ಕಾನೂನು ಪ್ರಕಾರ ನಡೆಯಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.