ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ

Last Updated 29 ಜೂನ್ 2020, 14:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿಯ ಐದು ಸ್ಥಾಯಿ ಸಮಿತಿಗಳಿಗೆ ಎರಡನೇ ಅವಧಿಗೆ ಸದಸ್ಯರು ಮತ್ತು ಅಧ್ಯಕ್ಷರನ್ನು ಆಯ್ಕೆ ಮಾಡಲು ಸೋಮವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಎಲ್ಲ ಸಮಿತಿಗಳಿಗೂ ಅವಿರೋಧವಾಗಿ ಸದಸ್ಯರು ಮತ್ತು ಅಧ್ಯಕ್ಷರ ಆಯ್ಕೆ ನಡೆಯಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬೆಳಿಗ್ಗೆ 9.30ಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರ ಅಧ್ಯಕ್ಷತೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.

ಜಿಲ್ಲೆಯ ಶಾಸಕರು, ಸಂಸದರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಸೇರಿ ಒಟ್ಟು 41 ಮತದಾರು ಚುನಾವಣೆಯಲ್ಲಿ ಭಾಗವಹಿಸಲು ಅವಕಾಶವಿತ್ತು. ಈ ಪೈಕಿ 24 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಸಾಮಾನ್ಯ ಸ್ಥಾಯಿ ಸಮಿತಿಗೆ ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು ಅವರು ಪದನಿಮಿತ್ತ ಸದಸ್ಯ ಮತ್ತು ಅಧ್ಯಕ್ಷರಾಗಿದ್ದಾರೆ. ಈ ಸಮಿತಿಗೆ 6ಕ್ಕೆ ಮೀರದಂತೆ ಸದಸ್ಯರನ್ನು (ಅಧ್ಯಕ್ಷರು, ಉಪಾಧ್ಯಕ್ಷರನ್ನು ಹೊರತುಪಡಿಸಿ) ಚುನಾಯಿಸುವ ಅವಕಾಶವಿತ್ತು. ಚುನಾವಣೆಯಲ್ಲಿ ಸಮಿತಿ ಸದಸ್ಯರಾಗಿ ಜಿ.ಸುಬ್ಬಿರೆಡ್ಡಿ, ಎನ್. ಶ್ರೀನಿವಾಸ್, ಕೆ.ಎಂ.ಮುನೇಗೌಡ, ಬಿ.ಸಿ.ತನುಜಾ, ಗಾಯತ್ರಿ ನಂಜುಂಡಪ್ಪ, ಎಂ.ಆರ್.ವರಲಕ್ಷ್ಮೀ ಅವಿರೋಧವಾಗಿ ಆಯ್ಕೆಯಾದರು.

ಹಣಕಾಸು ಮತ್ತು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿಗೆ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅವರು ಪದನಿಮಿತ್ತ ಸದಸ್ಯ ಮತ್ತು ಅಧ್ಯಕ್ಷರಾಗಿದ್ದಾರೆ. ಚುನಾವಣೆಯಲ್ಲಿ ಸಮಿತಿ ಸದಸ್ಯರಾಗಿ ಗಾಯತ್ರಿ ನಂಜುಂಡಪ್ಪ, ವಿ. ನಾರಾಯಣಮ್ಮ ವೆಂಕಟೇಶ್, ಪ್ರಕಾಶ್, ಎಚ್.ವಿ.ಮಂಜುನಾಥ್, ಶಿವಣ್ಣ, ಆರ್.ಭವ್ಯಾ ರಂಗನಾಥ್ ಅವರು ಅವಿರೋಧವಾಗಿ ಚುನಾಯಿತರಾದರು.

ಉಳಿದಂತೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗಳಿಗೆ ಆಯ್ಕೆಯಾಗುವ ಸದಸ್ಯರು ತಮ್ಮಲ್ಲೇ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಆರ್.ಭವ್ಯಾ ರಂಗನಾಥ್, ಕಮಲಮ್ಮ, ವಿ. ನಾರಾಯಣಮ್ಮ ವೆಂಕಟೇಶ್, ಎನ್.ಶ್ರೀನಿವಾಸ್, ಕೆ.ಸಿ.ರಾಜಾಕಾಂತ್, ಸುನಂದಮ್ಮ, ಎಂ.ಆರ್ ವರಲಕ್ಷ್ಮೀ ಅವರು ಅವಿರೋಧವಾಗಿ ಆಯ್ಕೆಯಾದರು. ಈ ಪೈಕಿ ಕಮಲಮ್ಮ ಅವರು ಅಧ್ಯಕ್ಷ ಸ್ಥಾನಕ್ಕೆ ಕೆ.ಸಿ.ರಾಜಾಕಾಂತ್ ಅವರ ಹೆಸರನ್ನು ಸೂಚಿಸಿದರು. ಅಧ್ಯಕ್ಷ ಸ್ಥಾನಕ್ಕೆ ಬೇರೆ ಯಾರೂ ಪ್ರಸ್ತಾವನೆ ಸಲ್ಲಿಸಿದ ಕಾರಣ ರಾಜಾಕಾಂತ್ ಅವರು ವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.

ಚುನಾವಣೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ ಸದಸ್ಯರಾಗಿ ಎ‌.ಅರುಂಧತಿ, ಕಮಲಮ್ಮ, ಜಯರಾಮರೆಡ್ಡಿ, ಪ್ರಕಾಶ್, ಮುನಿಯಪ್ಪ, ಕೆ.ಎಂ.ಮುನೇಗೌಡ, ಎಚ್.ವಿ.ಮಂಜುನಾಥ್ ಅವರು ಅವಿರೋಧವಾಗಿ ಆಯ್ಕೆಯಾದರು. ಈ ಪೈಕಿ ಎಚ್‌.ವಿ.ಮಂಜುನಾಥ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಮುನಿಯಪ್ಪ ಅವರ ಹೆಸರು ಸೂಚಿಸಿದರು. ಪ್ರತಿಸ್ಪರ್ಧಿಗಳು ಇಲ್ಲದ ಕಾರಣಕ್ಕೆ ಮುನಿಯಪ್ಪ ಅವರು ಆ ಸಮಿತಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಚುನಾಯಿತರಾದರು.

ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಗೆ ಜಯರಾಮರೆಡ್ಡಿ, ಶಿವಣ್ಣ, ಪವಿತ್ರ, ಪ್ರಮೀಳಾ, ಸುಬ್ಬಿರೆಡ್ಡಿ, ಕವಿತಾ ಕೃಷ್ಣಮೂರ್ತಿ, ಸುನಂದಮ್ಮ ಅವಿರೋಧವಾಗಿ ಆಯ್ಕೆಯಾದರು. ಈ ಪೈಕಿ ಸುನಂದಮ್ಮ ಅವರು ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಕವಿತಾ ಕೃಷ್ಣಮೂರ್ತಿ ಅವರ ಹೆಸರು ಸೂಚಿಸಿದರು. ಬೇರೆ ಯಾವ ಹೆಸರು ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪವಾಗದ ಕಾರಣ ಕವಿತಾ ಅವರು ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT