ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ ತಾಲ್ಲೂಕಿನಲ್ಲಿ ವಿಸ್ತಾರವಾಗಿದೆಯೇ ಖೋಟಾನೋಟು ಜಾಲ?

Last Updated 22 ಜನವರಿ 2023, 4:30 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ಹೊರವಲಯದ ಗಾಂಧಿನಗರ ಊಲವಾಡಿ ರಸ್ತೆಯಲ್ಲಿರುವ ಹಳೆಯ ಕಟ್ಟಡದಲ್ಲಿ ₹ 2 ಸಾವಿರ ಮುಖಬೆಲೆಯ ಖೋಟಾ ನೋಟುಗಳ ಮುದ್ರಣವಾಗುತ್ತಿದ್ದು ಮತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿರುವುದು ನಗರದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ನಗರ ಮತ್ತು ತಾಲ್ಲೂಕಿನ ಹಳ್ಳಿಗಳಲ್ಲಿ ಖೋಟಾ ನೋಟುಗಳ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. ಖೋಟಾ ನೋಡು ಜಾಲ ಮತ್ತಷ್ಟು ವಿಸ್ತಾರವಾಗಿದೆಯೇ ಎನ್ನುವ ಅನುಮಾನಗಳು
ಮೂಡಿಸಿದೆ.

ದೂರದ ನಗರಗಳಲ್ಲಿ ಖೋಟಾ ನೋಟುಗಳ ಮುದ್ರಣ, ಚಲಾವಣೆ, ಬಂಧನ ಮತ್ತಿತರ ವರದಿಗಳನ್ನು ಮಾಧ್ಯಮಗಳಲ್ಲಿ ಕಾಣುತ್ತಿದ್ದ ನಾಗರಿಕರಿಗೆ ನಮ್ಮ ನಗರದಲ್ಲಿ ಇಂತಹ ಜಾಲ ನಡೆಯುತ್ತಿದೆ ಎಂಬ ಸುದ್ದಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಹಿರಿಯ ನಾಗರಿಕ ಸಂತೋಷ್ ಬಾಬು.

ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿ ಆಗಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಬಾರ್ನ್ ಫೌಂಡೇಶನ್ ಹಳೆಯ ಪಾಳುಬಿದ್ದ ಕಟ್ಟಡದಂತಿದೆ. ಕಾಂಪೌಂಡ್ ಒಂದು ಭಾಗದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವಿದೆ. ಅದು ಪೂರ್ಣಗೊಂಡಿಲ್ಲ. ಸುತ್ತಮುತ್ತಲು ಯಾವ ಮನೆಗಳಿಲ್ಲ. ಪಕ್ಕದಲ್ಲಿ ಒಂದು ಚರ್ಚ್ ಇದೆ. ಆ ಕಡೆ ಯಾರು ಸುಳಿಯುವುದಿಲ್ಲ ಎಂದು ಈ ಕಟ್ಟಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು
ಹೇಳುತ್ತಾರೆ.

ಹೆಚ್ಚಿನ ಹಣದ ಆಸೆಗಾಗಿ ಸ್ಥಳೀಯರು ಈ ಕೆಲಸ ಮಾಡುತ್ತಿರಬಹುದು. ಇದರ ಹಿಂದೆ ದೊಡ್ಡ ಮತ್ತು ವಿಸ್ತಾರವಾದ ಜಾಲ ಇರಬೇಕು. ಪೊಲೀಸರ ತನಿಖೆಯಿಂದ ಇವರನ್ನು ಮಟ್ಟ ಹಾಕಬೇಕಾಗಿದೆ. ಯಾರಿಗೂ ಯಾವುದೇ ಅನುಮಾನ ಬರದಂತೆ ಒಬ್ಬ ಕಾವಲುಗಾರ ಮಾತ್ರ ಕಟ್ಟಡ ಕಾಯುವವನಂತೆ ನಟಿಸುತ್ತಿದ್ದನು ಎನ್ನುವುದು ಆ ರಸ್ತೆಯಲ್ಲಿ ಸಂಚರಿಸುತ್ತಿದ್ದವರು ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT