ಬುಧವಾರ, ಮಾರ್ಚ್ 29, 2023
31 °C

309ಕ್ಕೆ ಇಳಿದ ಕೊರೊನಾ ಸೋಂಕಿತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಪ್ರಮಾಣ ಗಣನೀಯವಾಗಿ ಇಳಿಕೆ ಆಗುತ್ತಿದೆ. ಭಾನುವಾರಕ್ಕೆ ಸಕ್ರಿಯ ಸೋಂಕಿತರ ಸಂಖ್ಯೆ 309ಕ್ಕೆ ಇಳಿದಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಗುಣವಾಗುತ್ತಿರುವವರ ಪ್ರಮಾಣ ಶೇ 98.38ರಷ್ಟಿದೆ. ಭಾನುವಾರಕ್ಕೆ ಸೋಂಕಿನ ಒಟ್ಟು ಪ್ರಮಾಣ ಜಿಲ್ಲೆಯಲ್ಲಿ ಶೇ 0.33ರಷ್ಟಿದೆ. ಭಾನುವಾರ ಜಿಲ್ಲೆಯಲ್ಲಿ 13 ಜನರಿಗೆ ಸೋಂಕು ತಗುಲಿದೆ.

50 ರೋಗಿಗಳು ಗುಣವಾಗಿದ್ದಾರೆ. ಚಿಂತಾಮಣಿ ತಾಲ್ಲೂಕಿನ 43 ವರ್ಷದ ಪುರುಷ ಮೃತಪಟ್ಟಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ 3, ಚಿಂತಾಮಣಿ 2, ಗೌರಿಬಿದನೂರು 2, ಶಿಡ್ಲಘಟ್ಟ ತಾಲ್ಲೂಕಿನ 1 ಜನರಿಗೆ ಸೋಂಕು ದೃಢವಾಗಿದೆ. ಇವರಲ್ಲಿ 8 ಮಹಿಳೆಯರು ಮತ್ತು 5 ಪುರುಷರು ಇದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನ 20, ಬಾಗೇಪಲ್ಲಿ 7, ಚಿಂತಾಮಣಿ 1, ಗೌರಿಬಿದನೂರು 13, ಶಿಡ್ಲಘಟ್ಟ ತಾಲ್ಲೂಕಿನ 9 ರೋಗಿಗಳು ಗುಣವಾಗಿದ್ದಾರೆ. ಭಾನುವಾರ 3,873 ಜನರ ಗಂಟಲು ಸ್ರಾವ ಮಾದರಿಯನ್ನು ‍ಪರೀಕ್ಷೆಗೆ ಸಂಗ್ರಹಿಸಲಾಗಿದೆ.

ನಾಗರಿಕರು ಕೋವಿಡ್‌ ನಿಯಮ ಪಾಲಿಸಲು ಜಿಲ್ಲಾಡಳಿತ
ಸೂಚಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು