ಶಾಲೆಯ ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕರಿಗೆ ನೀಡಲೆಂದು ವಿದ್ಯಾರ್ಥಿಗಳು ಸಂಗ್ರಹಿಸಿದ್ದ ಹಣದಲ್ಲಿ ಸೈಕಲ್ ಲೈಬ್ರರಿ ಯೋಜನೆ ಮೂಡಿತ್ತು. ಈಗ ಸೈಕಲ್‌ಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದೆ
– ಶಿವಶಂಕರ್, ಚೀಮಂಗಲ ಸರ್ಕಾರಿ ಶಾಲೆ ಮುಖ್ಯಶಿಕ್ಷಕ
ಚೀಮಂಗಲದಲ್ಲಿ ಸೈಕಲ್ ಲೈಬ್ರರಿ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಅವಶ್ಯವಿರುವ ಶಾಲೆಗಳಲ್ಲಿ ದಾನಿಗಳ ನೆರವು ಪಡೆದು ಸೈಕಲ್ ಲೈಬ್ರರಿ ಮಾಡುವ ಯೋಚನೆ ಇದೆ.