ಬಾಗೇಪಲ್ಲಿ: ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾನಿಂದ ಪಟ್ಟಣದ ಡಾ.ಎಚ್.ಎನ್.ವೃತ್ತದಲ್ಲಿ ಕಾರ್ಮಿಕರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಎಲ್ಪಿಐ ರಾಜ್ಯ ಕಾರ್ಯದರ್ಶಿ ಬಸವಲಿಂಗಪ್ಪ ಮಾತನಾಡಿ, ಕಾರ್ಮಿಕರಿಗೆ 8ಗಂಟೆ ಕೆಲಸ ಮಾತ್ರ ನಿಗದಿ ಮಾಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ, ಗ್ರ್ಯಾಚುಟಿ ಸೇರಿದಂತೆ ವಿವಿಧ ಯೋಜನೆಗಳಲ್ಲಿನ ಎಲ್ಲಾ ಸೌಲಭ್ಯ, ಅನುದಾನ ಸಿಗಬೇಕು. ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿದ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು. ಕೃಷಿ ಕೂಲಿ ಕಾರ್ಮಿಕರ ವಿರೋಧಿನೀತಿಗಳನ್ನು ಜಾರಿ ಮಾಡಿದರೆ, ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು. ಅಗತ್ಯ ವಸ್ತುಗಳ ಏರಿಕೆಯಿಂದ ಬಡಜನರು, ಕೃಷಿಕೂಲಿಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.

ಭಯೋತ್ಪಾದನೆಯನ್ನು ಹತ್ತಿಕ್ಕಬೇಕು. ಭಯೋತ್ಪಾದಕತೆಯನ್ನು ಸೃಷ್ಟಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಭಯೋತ್ಪಾದಕರ ಗುಂಡಿನ ದಾಳಿಗಳಿಂದ ಅಮಾಯಕ ಪ್ರಜೆಗಳು ಹುತಾತ್ಮರಾಗಿದ್ದಾರೆ. ಅಪ್ಪ, ಅಮ್ಮ, ಕುಟುಂಬಸ್ಥರನ್ನು ಕಳೆದುಕೊಂಡಿದ ದೃಶ್ಯಗಳು ಮನ ಕುಲುಕುವಂತೆ ಮಾಡಿದೆ. ದೇಶದಲ್ಲಿ ಬಡತನ, ನಿರುದ್ಯೋಗ ಹೆಚ್ಚಾಗಿದೆ. ಕೋಟ್ಯಂತರ ಕಾರ್ಮಿಕರು ದುಡಿಯುವ ಸಂಸ್ಥೆಗಳನ್ನು, ಕಾರ್ಮಿಕರನ್ನು ಬೀದಿಪಾಲು ಮಾಡಿದ್ದಾರೆ ಎಂದು ತಿಳಿಸಿದರು.

ರಾಮಚಂದ್ರಪ್ಪ, ಚಲಪತಿ, ಮಂಜೂರ್ಅಹಮದ್, ಮುಜಾಮಿಲ್ಲಾ, ವೆಂಕಟರವಣಪ್ಪ, ಮುನೀರ್ಖಾನ್, ರಾಮರೆಡ್ಡಿ, ಪ್ರಮೀಳಮ್ಮ, ಶಂಕರಪ್ಪ, ತಾಸಿನ್ತಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.