ಭಾನುವಾರ, ಆಗಸ್ಟ್ 25, 2019
28 °C
ಹೊಸ ವಿನ್ಯಾಸದ ‘ಡೆಕ್ಕನ್ ಹೆರಾಲ್ಡ್‌’ ಬಿಡುಗಡೆ

ವಿನ್ಯಾಸ ಬದಲಾವಣೆ ಅಭಿನಂದನೀಯ

Published:
Updated:
Prajavani

ಚಿಕ್ಕಬಳ್ಳಾಪುರ: ಹೊಸ ವಿನ್ಯಾಸದಲ್ಲಿ ಹೊರತಂದ ‘ಪ್ರಜಾವಾಣಿ’ ಸೋದರ ಪತ್ರಿಕೆ ‘ಡೆಕ್ಕನ್ ಹೆರಾಲ್ಡ್‌’ ದಿನಪತ್ರಿಕೆಯನ್ನು ಸೋಮವಾರ ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕರಾದ ಎನ್.ಎಚ್.ಶಿವಶಂಕರ ರೆಡ್ಡಿ, ವಿ.ಮುನಿಯಪ್ಪ, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ಎಸ್ಪಿ ಕೆ.ಸಂತೋಷ್‌ ಬಾಬು, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮುಖಂಡ ಪ್ರಕಾಶ್‌ ರೆಡ್ಡಿ ಅವರು ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ, ‘ಸುಮಾರು 70 ವರ್ಷಗಳಿಂದ ಓದುಗರಿಗೆ ವಿಶ್ವಾಸಾರ್ಹವಾದ ಸುದ್ದಿಗಳನ್ನು ನೀಡುತ್ತ ಬಂದಿರುವ ಪ್ರಜಾವಾಣಿ ಪತ್ರಿಕೆ ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಘನತೆ ಕಾಪಾಡಿಕೊಂಡು ಬಂದಿದೆ. ಅದೇ ಹಾದಿಯಲ್ಲಿ ಸಾಗಿ ಬರುತ್ತಿರುವ ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆ ಬದಲಾದ ಕಾಲಕ್ಕೆ ತಕ್ಕಂತೆ ತನ್ನ ವಿನ್ಯಾಸ ಬದಲಿಸಿಕೊಳ್ಳುತ್ತಿರುವುದು ಅಭಿನಂದನೀಯ. ಇದನ್ನು ಎಲ್ಲ ವಯೋಮಾನದವರು ಮೆಚ್ಚಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

Post Comments (+)