ದೇವರೆಡ್ಡಿಪಲ್ಲಿ ಕೆರೆಯಲ್ಲಿ ನೀರು ಸಂಗ್ರಹದೊಂದಿಗೆ ದಶಕಗಳ ಕನಸು ನನಸಾದಂತೆ ಆಗಿದೆ. ಕೆರೆಯಲ್ಲಿನ ನೀರು ತೆರೆದ ಹಾಗೂ ಕೊಳವೆಬಾವಿಗಳಿಗೆ ಹರಿಯಲಿದೆ. ಕೃಷಿ ಮತ್ತು ಕುಡಿಯುವ ನೀರಿನ ಹಾಹಾಕಾರವನ್ನು ನೀಗಿಸಲಿದೆ
ಡಿ.ಎನ್. ಸುಧಾಕರರೆಡ್ಡಿ ಗ್ರಾಮ ಪಂಚಾಯಿತಿ ಸದಸ್ಯ ದೇವರೆಡ್ಡಿಪಲ್ಲಿ
ಕೆರೆಯ ಕಾಮಗಾರಿಯಿಂದ ಶಾಶ್ವತವಾಗಿ ನೀರು ಸಿಗಲಿದೆ. ಕೆರೆಗಳೇ ನೀರಿನ ಸಂಗ್ರಹದ ಮೂಲಗಳು . ಕೆರೆಗಳಿಗೆ ನೀರು ಹರಿಯಲು ಮುಖ್ಯವಾಗಿ ಕಾಲುವೆಗಳು ಮತ್ತು ಪೋಷಕ ಕಾಲುವೆಗಳನ್ನು ಅಭಿವೃದ್ಧಿಪಡಿಸಬೇಕು
ಸಿ.ಶಿವಪ್ಪ ದೇವರೆಡ್ಡಿಪಲ್ಲಿ ಗ್ರಾಮಸ್ಥ
ಮತ್ತಷ್ಟು ಕೆರೆಗಳ ಅಭಿವೃದ್ಧಿಗೆ ಕ್ರಮ ನದಿ ನಾಲೆಗಳು ಮತ್ತು ಇಲ್ಲದ ತಾಲ್ಲೂಕಿನಲ್ಲಿ ಕೆರೆಗಳೇ ನೀರಿನ ಮೂಲಧಾರವಾಗಿವೆ. ಹೀಗಾಗಿ ಕೆರೆಗಳನ್ನು ಅಭಿವೃದ್ಧಿಪಡಿಸಿ ಕೃಷಿ ಮತ್ತು ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಲು ಆದ್ಯತೆ ನೀಡಲಾಗುವುದು. ₹3.6 ಕೋಟಿ ವೆಚ್ಚದಲ್ಲಿ ಕೆರೆಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಕೆರೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆರೆಯ ಕಾಮಗಾರಿ ಮುಗಿದ ಮೊದಲ ವರ್ಷವೇ ಕೆರೆ ತುಂಬಿರುವುದು ಸಂತಸ ತಂದಿದೆ.