ಬೇರೊಬ್ಬ ಕಾರ್ಯಕರ್ತೆ ನೇಮಕ ಭರವಸೆ
ಕಲಾವತಿ ವಿರುದ್ಧ ಕ್ರಮ ಆಗುವವರೆಗೂ ಅಂಗನವಾಡಿ ಕೇಂದ್ರ ನಡೆಯಲು ಬಿಡುವುದಿಲ್ಲ. ಮಕ್ಕಳನ್ನು ಕೂಡ ಕೇಂದ್ರಕ್ಕೆ ಕಳುಹಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಇದಕ್ಕೆ ಒಪ್ಪದ ಸಿಡಿಪಿಒ ಯಾರೋ ಒಬ್ಬರಿಂದ ಹಲವರಿಗೆ ತೊಂದರೆ ಆಗುವುದು ಬೇಡ. ಅವರು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಆಗುತ್ತದೆ. ಆದರೆ ಗ್ರಾಮದ ಮಕ್ಕಳು ಬಾಣಂತಿ ಗರ್ಭಿಣಿಯರು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಬಾರದು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಕೊನೆಗೆ ಕಲಾವತಿ ಅವರ ಬದಲಿಗೆ ಬೇರೊಬ್ಬ ಕಾರ್ಯಕರ್ತೆಯನ್ನು ನೇಮಿಸಲಾಗುವುದು ಎಂದು ಹೇಳಿ ಗ್ರಾಮಸ್ಥರ ಮನವೊಲಿಸಿದರು.