ದಾನ ಧರ್ಮಕ್ಕೆ ಪ್ರಶಸ್ತ ಸಮಯ: ಚಂದ್ರಗ್ರಹಣದ ಬಗ್ಗೆ ಟಿವಿ ಜ್ಯೋತಿಷಿಗಳು ಜನರನ್ನು ಭಯಭೀತರನ್ನಾಗಿಸುತ್ತಿರುವ ಸಮಯದಲ್ಲಿ ಚರಿತ್ರೆಗೆ ಸಂಬಂಧಿಸಿದ ವಿಷಯವನ್ನು ಹೇಳಬೇಕಿದೆ. ನಾನು ಗಮನಿಸಿದಂತೆ ನಂದಿ ಸೀಮೆಯ ಹಲವಾರು ಶಿಲಾಶಾಸನಗಳನ್ನು ರಾಜಮಹಾರಾಜರು ಹಾಕಿಸಿರುವುದೇ ಚಂದ್ರಗ್ರಹಣದ ಸಮಯದಲ್ಲಿ. ದಾನ ಧರ್ಮಗಳಿಗೆ ಅದೊಂದು ಪ್ರಶಸ್ತ ಸಮಯ ಮತ್ತು ದಾನದ ಫಲ ದಕ್ಕಲು ಅದು ಸೂಕ್ತ ಸಮಯ ಎಂಬುದು ಇದರಿಂದ ತಿಳಿದುಬರುತ್ತದೆ.