ಚಿಂತಾಮಣಿ: ಮರಗಳ ಕಟಾವು ಮಾಡಲು ಅನುಮತಿಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಉಪ ವಲಯದ ಸಹಾಯಕ ಅರಣ್ಯಾಧಿಕಾರಿ ಧನಲಕ್ಷ್ಮಿ ಮತ್ತು ಜೀಪ್ ಚಾಲಕ ಮಣಿಕಂಠ ಶುಕ್ರವಾರ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ತಾಲ್ಲೂಕಿನ ದೊಡ್ಡಗಂಜೂರು ಬಳಿಯ ಪೆಟ್ರೋಲ್ ಬಂಕ್ ಜಾಗದಲ್ಲಿದ್ದ ಮರಗಳನ್ನು ಕಟಾವು ಮಾಡಲು ಗ್ರಾಮದ ರೈತ ಶ್ರೀನಾಥ್ ಎಂಬುವವರು ಉಪವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಮರ ಕಟಾವು ಮಾಡಲು ಮೌಖಿಕವಾಗಿ ಅನುಮತಿ ನೀಡಿದ್ದರು ಎಂದು ತಿಳಿದು ಬಂದಿದೆ.

ಅನುಮತಿ ಪಡೆಯುವುದಕ್ಕಿಂತ ಮೊದಲೇ ಮರ ಕಟಾವು ಮಾಡಲಾಗಿದೆ ಎಂದು ಜಮೀನಿನ ಮಾಲೀಕ ಶ್ರೀನಾಥ್ ಅವರನ್ನು ಧನಲಕ್ಷ್ಮಿ ತರಾಟೆಗೆ ತೆಗೆದುಕೊಂಡಿದ್ದರು.

ನಂತರ ಅರಣ್ಯ ಇಲಾಖೆ ಜೀಪ್ ಚಾಲಕ ಮಣಿಕಂಠ ಮೂಲಕ ಮಾತುಕತೆ ನಡೆದು ₹50 ಸಾವಿರ ಲಂಚಕ್ಕೆ ಒತ್ತಾಯಿಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಚಿಕ್ಕಬಳ್ಳಾಪುರ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು. ಶುಕ್ರವಾರ ಅರಣ್ಯಾಧಿಕಾರಿ ಕಚೇರಿಯಲ್ಲೇ ₹15 ಸಾವಿರ ಲಂಚ ಪಡೆಯುತ್ತಿದ್ದಾಗ ದಾಳಿ ನಡೆದಿದೆ.

ಉಪ ವಲಯ ಸಹಾಯಕ ಅರಣ್ಯಧಿಕಾರಿ ಧನಲಕ್ಷ್ಮಿ ಹಾಗೂ ಜೀಪ್ ಚಾಲಕ ಮಣಿಕಂಠ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.