ಚಿಂತಾಮಣಿ: ನಗರದ ಎಂ.ಜಿ ರಸ್ತೆಯ ಸರ್ಕಾರಿ ಆಸ್ಪತ್ರೆಯ ಮುಂಭಾಗದ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುವ ಇಬ್ಬರು ಕೆಲಸಗಾರರ ನಡುವೆ ಮಂಗಳವಾರ ಸಂಜೆ ನಡೆದ ಕ್ಷುಲ್ಲಕ ಕಾರಣದ ಜಗಳ ಒಬ್ಬರ ಕೊಲೆಯಲ್ಲಿ ಅಂತ್ಯಗೊಂಡಿದೆ.

ನಗರದ ನಾರಸಿಂಹಪೇಟೆಯ ನಿವಾಸಿ ಅರ್ಬಾಜ್ (22) ಮೃತಪಟ್ಟಿರುವ ಯುವಕ. ವೆಂಕಟಗಿರಿಕೋಟೆಯ ನಿವಾಸಿ ಪಹಾದ್ ಕೊಲೆ ಮಾಡಿರುವ ಆರೋಪಿ.

ನಗರದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ವಾಸೀಮ್ ಎಂಬುವವರ ಹಣ್ಣಿನ ಅಂಗಡಿಯಲ್ಲಿ ಅರ್ಬಾಜ್ ಕೆಲಸ ಮಾಡುತ್ತಿದ್ದ. ಅದರ ಪಕ್ಕದಲ್ಲೇ ಇರುವ ಸಾದಿಕ್ ಎಂಬುವವರ ಹಣ್ಣಿನ ಅಂಗಡಿಯಲ್ಲಿ ಪಹಾದ್ ಕೆಲಸ ಮಾಡುತ್ತಿದ್ದನು. ಮಂಗಳವಾರ ಸಂಜೆ ಯಾವುದೋ ವಿಷಯಕ್ಕಾಗಿ ತಮಾಷೆಯಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಜಗಳ ಕೈಕೈ ಮಿಲಾಯಿಸುವ ಹಂತದಲ್ಲಿ ಪಹಾದ್ ಹಣ್ಣು ಕತ್ತರಿಸುವ ಚಾಕುವನ್ನು ಅರ್ಬಾಜ್ ಮೇಲೆ ಎಸೆದಿದ್ದಾನೆ. ಅದು ಕುತ್ತಿಗೆಗೆ ಬಿದ್ದು ಗಂಟಲು ಬಳಿ ಚುಚ್ಚಿಕೊಂಡಿದೆ.

ಗಾಯಾಳುವನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಕೋಲಾರಕ್ಕೆ ಹೋಗುತ್ತಿರುವಾಗ ಮಾರ್ಗಮಧ್ಯೆ ಸುಗಟೂರು ಬಳಿ ಮೃತಪಟ್ಟಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಪಹಾದ್ ಮತ್ತು ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಆಕಸ್ಮಿಕವೋ ಅಥವಾ ಯಾವುದಾದರೂ ಹಳೆಯ ದ್ವೇಷವೋ ಎನ್ನುವುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.

ಎಸ್ಪಿ ಕುಶಾಲ್ ಚೌಕ್ಸೆ, ಪ್ರಭಾರಿ ಡಿವೈಎಸ್ಪಿ ರವಿಕುಮಾರ್, ನಗರ ಠಾಣೆ ಇನ್ಸ್ಪೆಕ್ಟರ್ ವಿಜಿಕುಮಾರ್, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಿವರಾಜ್ ಸ್ಥಳಕ್ಕೆ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.