ಗುಡಿಬಂಡೆ: ಪಟ್ಟಣದ ಎಂಟನೇ ವಾರ್ಡ್ನಲ್ಲಿ ಶುಕ್ರವಾರ ಗಂಡ ಹೆಂಡತಿ ಮಧ್ಯೆ ಜಗಳ ನಡೆದು ಪತ್ನಿಯ ಕೊಲೆಯಾಗಿದೆ.

ರಾಮಿಜಾಬಿ (25) ಕೊಲೆಯಾದವರು. ಈಕೆ ಪಟ್ಟಣದಲ್ಲಿ ಸುಮಾರು 3 ವರ್ಷಗಳಿಂದ ಎರಡನೇ ಗಂಡ ಬಾಬಾಜಾನ್ ಅವರೊಂದಿಗೆ ವಾಸವಾಗಿದ್ದರು.

ಶುಕ್ರವಾರ ಮಧ್ಯಾಹ್ನ ಗಂಡ ಹೆಂಡತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಜಗಳದಲ್ಲಿ ಪತ್ನಿಯನ್ನು ಗಂಡ ಬಾಬಾಜಾನ್ ಕೊಲೆ ಮಾಡಿದ್ದಾನೆ. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆರೋಪಿ ಬಾಬಾಜಾನ್ನನ್ನು ಬಂಧಿಸಿದ್ದಾರೆ.

ರಮಿಜಾಬಿ ಮೂಲತಃ ಶ್ರೀನಿವಾಸಪುರ ಗ್ರಾಮದವರಾಗಿದ್ದಾರೆ. ಮೊದಲು ಮುಳಬಾಗಿಲು ತಾಲ್ಲೂಕಿನ ಅಲ್ಲಾಬಕಾಶ್ ಅವರೊಂದಿಗೆ ಮದುವೆಯಾಗಿತ್ತು. ನಂತರ ಅವರನ್ನು ಬಿಟ್ಟು ಬಾಬಾಜಾನ್ನೊಂದಿಗೆ ಎರಡನೇ ಮದುವೆಯಾಗಿ ಗುಡಿಬಂಡೆ ಪಟ್ಟಣದಲ್ಲಿ ವಾಸವಾಗಿದ್ದರು. ಆಗಾಗ್ಗೆ ಇಬ್ಬರ ನಡುವೆ ಗಲಾಟೆಗಳು ಆಗುತ್ತಿದ್ದು, ಗಂಡ ಹೆಂಡತಿ ಗಲಾಟೆ ಕೊನೆಯಾಗಿ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಡಿವೈಎಸ್ಪಿ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.