ಕುಣಿಗಲ್: ತಾಲ್ಲೂಕಿನ ಗೊಟ್ಟಿಕೆರೆ ತುಂಬಿ ಕೋಡಿಯಾದರೆ ಸಂಭ್ರಮಿಸುವುದಕ್ಕೆ ಸಂಕಟಪಡುವವರೆ ಹೆಚ್ಚಾಗಿದ್ದಾರೆ. ಸ್ಥಳೀಯ ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯಯುಕ್ತ ನೀರು ಕೋಡಿಯಲ್ಲಿ ಹರಿದು ಸುತ್ತಮುತ್ತಲಿನ ಗ್ರಾಮಕ್ಕೆ ಹರಿಯುತ್ತದೆ ಎನ್ನುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಅಂಚೇಪಾಳ್ಯ ಕೈಗಾರಿಕೆ ಪ್ರದೇಶದ ಪಕ್ಕದಲ್ಲಿ ಬರುವ ಗೊಟ್ಟಿಗೆರೆ ಕೆರೆ ಅಂತರಗಂಗೆಯಿಂದ ಆವೃತ್ತವಾಗಿದೆ. ಅಂತರಗಂಗೆ ಗೆಡ್ಡೆ ಆವರಿಸಲು ಸ್ಥಳೀಯ ಕಾರ್ಖಾನೆಯ ರಾಸಾಯನಿಕ ತ್ಯಾಜ್ಯದ ನೀರು ಮತ್ತು ಕಲುಷಿತ ನೀರು ಕೆರೆಗೆ ಬಂದು ಸೇರುತ್ತಿರುವುದು ಕಾರಣವಾಗಿದೆ.

ಕೆರೆ ಕೋಡಿಯಾಗಿರುವುದರಿಂದ ನೀರು ಮೊದಲು ಈರೇಕೆರೆ ನಂತರ ಬೇಗೂರು ಕೆರೆ, ಚಿಕ್ಕಕೆರೆ ಸೇರುತ್ತಿದೆ. ರಾಸಾಯನಿಕ ತ್ಯಾಜ್ಯದ ಕಲುಷಿತ ನೀರು ಹರಿದು ಬರುತ್ತಿರುವುದರಿಂದ ಸುತ್ತಮುತ್ತಲಿನ ಗೊಟ್ಟಿಕೆರೆ, ಮುದಗೆರೆ, ಅಂಚೇಪಾಳ್ಯ, ಬೇಗೂರು ಅಮಾನಿಕೆರೆ, ಶಂಭೂಗೌಡನಪಾಳ್ಯದ ವ್ಯಾಪ್ತಿಯ ಜಮೀನುಗಳಿಗೆ ಕಲುಷಿತ ನೀರು ಸೇರಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥ ಮಹಾದೇವ ಹೇಳಿದರು.

ಕಳೆದ ಎರಡು ವರ್ಷಗಳ ಹಿಂದೆ ಹೋರಾಟ ಮಾಡಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿ ಮತ್ತು ಜನಪ್ರತಿನಿಧಿಗಳು ತಾತ್ಕಾಲಿಕ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದಾರೆ ಹೊರತು ಶಾಶ್ವತ ಪರಿಹಾರ ಕಂಡುಹಿಡಿದು ಕೆರೆ ಉಳಿಸುವ ಪ್ರಯತ್ನ ಮಾಡಿಲ್ಲ ಎಂದು ಗ್ರಾಮಸ್ಥ ರಾಮಣ್ಣ ಆರೋಪಿಸಿದರು.

ಈ ಭಾಗದಲ್ಲಿ ವಲಸೆ ಪಕ್ಷಿಗಳು ಕಂಡುಬರುತ್ತಿದ್ದು, ಸಂತಾನೋಪತ್ಪತಿಗೆ ಪ್ರಶಸ್ತ ಸ್ಥಳವಾಗಿದೆ. ಕಲುಷಿತ ನೀರಿನಿಂದ ಜೀವ ವೈವಿಧ್ಯಗಳ ನಾಶಕ್ಕೆ ಕಾರಣವಾಗುತ್ತದೆ ಎಂದು ಜೀವಶಾಸ್ತ್ರ ಉಪನ್ಯಾಸಕ ಪುಟ್ಟಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.