ಶಿಡ್ಲಘಟ್ಟ: ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕುಗಳ ನಡುವಿನ ವೈ.ಹುಣಸೇನಹಳ್ಳಿ ಸ್ಟೇಷನ್ನಿಂದ 4 ಕಿ.ಮೀ. ದೂರದಲ್ಲಿ ಪುಟ್ಟ ಕಡಶಾನಹಳ್ಳಿ ಇದೆ. ಈ ಹಳ್ಳಿಯಲ್ಲಿ ಕ್ರಿ.ಶ. 1668ರಲ್ಲಿ ಸ್ಥಾಪನೆಯಾದ ಸಂತ ಅಂತೋನಿ ಚರ್ಚ್ ಇದೆ. ಈ ಭಾಗದ ಸುಮಾರು ಮೂರೂವರೆ ಶತಮಾನದ ಕ್ರೈಸ್ತರ ಬದುಕು, ಬವಣೆ, ಸೇವೆ ಹಾಗೂ ಇತಿಹಾಸವನ್ನು ಸಾರುತ್ತಾ ನಿಂತಿದೆ. ಈ ಚರ್ಚ್ ಗ್ರಾಮೀಣ ಭಾಗದಲ್ಲಿ ಬಡ ಪ್ರತಿಭಾವಂತ ಮಕ್ಕಳಿಗೆ ಉಚಿತ ವಿದ್ಯಾದಾನ ಮಾಡುತ್ತಿದೆ.

ಜಿಲ್ಲೆಯಲ್ಲಿ ಅತಿ ಪುರಾತನ ಚರ್ಚ್ಗಳಲ್ಲಿ ಒಂದಾದ ಕಡಶಾನಹಳ್ಳಿ ಸಂತ ಅಂತೋನಿ ಚರ್ಚ್ ಪುರಾತನ ಗೋಥಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿದೆ. 1648 ರಲ್ಲಿ ಮೈಸೂರಿನಲ್ಲಿ ತಮ್ಮ ಮಿಷನ್ ಪ್ರಾರಂಭಿಸಿದ ಜೆಸ್ಯೂಟ್ ಮಿಷನರಿಗಳು (ಮತಪ್ರಚಾರಕರು), ಆಗಿನ ಮೈಸೂರು ಸಂಸ್ಥಾನದ ವಿವಿಧ ಭಾಗಗಳಲ್ಲಿ ಕ್ರಿಶ್ಚಿಯನ್ ಸಮುದಾಯಗಳ ನೆಲೆಗಳನ್ನು ಸ್ಥಾಪಿಸಿದರು.

ಸುಮಾರು ಒಂದೂವರೆ ಅಥವಾ ಎರಡು ಶತಮಾನಗಳ ಹಿಂದೆ ಈ ಭಾಗದಲ್ಲಿದ್ದ ಬಹುತೇಕ ಕ್ರೈಸ್ತರು ಬೆಂಗಳೂರು ಮುಂತಾದ ನಗರಗಳಿಗೆ ಹೊಸ ಬದುಕನ್ನು ಕಟ್ಟಿಕೊಳ್ಳಲು ವಲಸೆ ಹೋದರೆಂದು ಇತಿಹಾಸದ ದಾಖಲೆಗಳಿಂದ ತಿಳಿದುಬರುತ್ತದೆ.

ಬಹುತೇಕ ಕ್ರೈಸ್ತರ ವಲಸೆಯಿಂದ ಚರ್ಚ್ ಹಾಗೂ ಅದರ ಸೇವಾ ಕಾರ್ಯಗಳು ಕುಂಠಿತವಾದವು. ನಿತ್ಯ ಪೂಜೆ ಮಾಡಲು ಗುರುಗಳು ಇಲ್ಲದ ಕಾರಣ ಚಿಕ್ಕಬಳ್ಳಾಪುರದ ಬಳಿ ಇರುವ ಸೂಸೇಪಾಳ್ಯ ಚರ್ಚ್ ಗುರುಗಳು ಇಲ್ಲಿಗೆ ತಿಂಗಳೊಮ್ಮೆ ಬಂದು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಹೋಗುತ್ತಿದ್ದರಂತೆ. ವೈ.ಹುಣಸೇನಹಳ್ಳಿಯ ರೈಲು ನಿಲ್ದಾಣಕ್ಕೆ ಬರುತ್ತಿದ್ದ ಕ್ರೈಸ್ತ ಪಾದ್ರಿಗಳನ್ನು ಕಡಶಾನಹಳ್ಳಿಯವರು ಎತ್ತಿನ ಗಾಡಿಯಲ್ಲಿ ಕರೆದುಕೊಂಡು ಬರುತ್ತಿದ್ದರೆಂದು ಹಿರಿಯರು ಹೇಳುತ್ತಾರೆ. ಬಡತನದಲ್ಲಿದ್ದ ಹಳ್ಳಿಯ ಜನರಿಗೆ ಚರ್ಚ್ ವತಿಯಿಂದ ದವಸ ಧಾನ್ಯಗಳನ್ನು ನೀಡಲಾಗುತ್ತಿತ್ತು.

ಚರ್ಚ್ನ ಸಾಮಾಜಿಕ ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಗಳು ಅನನ್ಯವಾದದ್ದು. ಈ ಹಳ್ಳಿಯಲ್ಲಿ ಹಿಂದೂ-ಕ್ರೈಸ್ತ ಧರ್ಮಿಯರು ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಹಿಂದೂಗಳು ಸಹ ಚರ್ಚಿಗೆ ಹೋಗುವ ಕ್ರೈಸ್ತ ಹಬ್ಬಗಳನ್ನು ಆಚರಿಸುವ ಹರಕೆ ಸಲ್ಲಿಸುವ ಪದ್ಧತಿಯಿದೆ.
ರಮೇಶ ಚನ್ನಪ್ಪ, ಬರಹಗಾರ

1986ರಲ್ಲಿ ಕಡಶಾನಹಳ್ಳಿ ಹಾಗೂ ಚಿಂತಾಮಣಿ ನಗರದಲ್ಲಿ ಎಂ.ಎಸ್.ಎಫ್.ಎಸ್. ವತಿಯಿಂದ ಎಸ್.ಎಫ್.ಎಸ್. ಕನ್ನಡ ಶಾಲೆ ಹಾಗೂ ಮಕ್ಕಳ ಅನಾಥಾಲಯಗಳನ್ನು ಏಕ ಕಾಲದಲ್ಲಿ ಫಾದರ್ ವರ್ಗೀಸ್ ಅವರ ನೇತೃತ್ವದಲ್ಲಿ ಪ್ರಾರಂಭಿಸಲಾಯಿತು. ಎಲ್ಲ ಜಾತಿಯ ಬಡ ಮಕ್ಕಳಿಗೆ ಇಲ್ಲಿ ಶಿಕ್ಷಣ ನೀಡಲಾಯಿತು. ಈ ಎಸ್.ಎಫ್.ಎಸ್. ಕನ್ನಡ ಶಾಲೆ ಹಾಗೂ ಅನಾಥಾಲಯದಲ್ಲಿ ಬೆಳೆದ ಸುತ್ತ ಮುತ್ತಲಿನ ಹಳ್ಳಿಯ ಮಕ್ಕಳು ಇಂದು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿದ್ದಾರೆ. ಶಿಕ್ಷಕರು, ಪೊಲೀಸ್, ಎಂಬಿಎ ಪದವೀಧರರು, ಡಾಕ್ಟರೇಟ್ ಪದವೀಧರರು, ಎಂಜಿನಿಯರ್ಗಳಾಗಿದ್ದಾರೆ.

ಬಡಮಕ್ಕಳಿಗೆ ವಿದ್ಯಾ ಕಾಶಿ

ಕಡಶಾನಹಳ್ಳಿ ಎಂದರೆ ಫಾದರ್ ವರ್ಗೀಸ್ ನೆನಪಾಗುತ್ತಾರೆ. ನಾನು 1988-1992ರವರೆಗೆ ಇಲ್ಲಿನ ಶಾಲೆಯಲ್ಲಿ ಶಿಕ್ಷಕನಾಗಿದ್ದೆ. ಕುಗ್ರಾಮವಾದ ಈ ಹಳ್ಳಿಯಲ್ಲಿ ಚರ್ಚು ಮತ್ತು ಚರ್ಚಿನ ಅನಾಥಾಲಯ ಅಸಂಖ್ಯಾತ ಬಡ ಮಕ್ಕಳಿಗೆ ವಿದ್ಯೆಯನ್ನು ಧಾರೆ ಎರೆದಿದೆ. ಓದು ಮುಗಿಸಿ ತಮ್ಮ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದೆ. ಆಂಧ್ರಪ್ರದೇಶ ಮತ್ತು ಕರ್ನಾಟಕದ ಹಲವು ಪ್ರತಿಭಾವಂತ ಮಕ್ಕಳನ್ನು ಬೆಳೆಸಿ ಅತ್ಯುನ್ನತ ಹುದ್ದೆಗಳಿಗೇರಲು ಆಶ್ರಯವಿತ್ತ ಕೇಂದ್ರವಿದು. ಫಾ. ವರ್ಗೀಸ್ ಕಾಲದಲ್ಲಿ ಇದು ಬಡ ಪ್ರತಿಭಾವಂತ ಮಕ್ಕಳಿಗೆ ನಿಜವಾದ ದೇವರ ತಾಣವಾಗಿತ್ತು ಎಂ.ಜೆ.ರಾಜೀವಗೌಡ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.