ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿಐದು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.
ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಿಜಿಎಸ್ ಶಾಲೆಯ ಪ್ರೀತಿ ಎಸ್, ಲೀಸಾ ಎಚ್.ಸಿ, ಜಯಂತಿ ಬಿ. ಗೌಡ,ಶಿಡ್ಲಘಟ್ಟದ ಬಿಜಿಎಸ್ ಶಾಲೆಯ ಜಿ ಹರ್ಷಿತಾ,ಗೌರಿಬಿದನೂರಿನ ಬಿ.ಜಿ.ಎಸ್ ಶಾಲೆಯ ತೃಪ್ತಿ ಕೆ.ಸಿ ಈ ಸಾಧನೆ ಮಾಡಿದ ವಿದ್ಯಾರ್ಥಿಗಳು. ಈ ಐದು ಮಂದಿಯೂ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು.