ಶುಕ್ರವಾರ, ಅಕ್ಟೋಬರ್ 7, 2022
24 °C
ಸಕಾಲದಲ್ಲಿ ಸಿಗದ ಡಿಎಪಿ: ರೈತರ ಆಕ್ರೋಶ

ರಸಗೊಬ್ಬರ ಪೂರೈಕೆ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ತಾಲ್ಲೂಕಿನಾದ್ಯಂತ ಉತ್ತಮ ಮಳೆ ಆಗುತ್ತಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಆದರೆ ಅಗತ್ಯಕ್ಕೆ ತಕ್ಕಂತೆ  ರಸಗೊಬ್ಬರ ಪೂರೈಕೆ ಆಗದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಡಿಎಪಿ ಗೊಬ್ಬರವು ರೈತರ ಬೇಡಿಕೆಗೆ ಅನುಗುಣವಾಗಿ ಕಾಲಕಾಲಕ್ಕೆ ಸರಬರಾಜು ಆಗುತ್ತಿಲ್ಲ ಎಂದು ರೈತರು ದೂರಿದ್ದಾರೆ.

ತಾಲ್ಲೂಕಿನ ಬಹುತೇಕ ಕಡೆ ಮಳೆ ಧಾರಾಕಾರವಾಗಿ ಸುರಿದಿದೆ. ಈಗ ರಸಗೊಬ್ಬರಗಳ ಅಗತ್ಯತೆಯೂ ಹೆಚ್ಚಾಗಿದೆ. ಆದರೆ ಡಿಎಪಿ ಮತ್ತು ಯೂರಿಯಾ ಕೊರತೆ ಕಾಣಿಸಿಕೊಂಡಿದೆ.

ಕೇಂದ್ರ ಸರ್ಕಾರ ಡಿಎಪಿ ಬೆಲೆ ಏರಿಸಿದಾಗ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಡಿಎಪಿ ಬೆಲೆಯನ್ನು ₹1,200 ಗೆ ಇಳಿಸಿ ರಸಗೊಬ್ಬರ ಉತ್ಪಾದನಾ ಕಂಪನಿಗಳಿಗೆ ಸಬ್ಸಿಡಿ ಹಣ ನೀಡುವುದಾಗಿ ಹೇಳಿತ್ತು. ಇದೇ ಕಾರಣಕ್ಕೆ ಈಗ ಕಂಪನಿಗಳು ಡಿಎಪಿಯನ್ನು ಹೆಚ್ಚಾಗಿ ಉತ್ಪಾದಿಸದೆ ಪೂರೈಕೆಯನ್ನೂ ಕಡಿಮೆ ಮಾಡಿವೆ ಎಂಬ ಆರೋಪವಿದೆ.

ರೈತರು ಬಹುತೇಕ ರಸಗೊಬ್ಬರ ಮಳಿಗೆಗಳು ಮತ್ತು ಸೊಸೈಟಿ ಮುಂದೆ ಡಿಎಪಿಗಾಗಿ ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ.

ತಿಂಗಳಿಂದಲೂ ಕೊರತೆ

‘ ಇದು ಬಿತ್ತನೆ ಮಾಡುವ ಕಾಲ. ಈಗ ನಮಗೆಲ್ಲರಿಗೂ ಡಿಎಪಿ ಅತ್ಯಗತ್ಯ. ಆದರೆ ಡಿಎಪಿ ಸಿಗುತ್ತಿಲ್ಲ. ಕೆಲವರು 20-20 ಗೊಬ್ಬರ ಕೊಂಡು ತಂದು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಕಳೆದ ಒಂದು ತಿಂಗಳಿಂದಲೂ ಡಿಎಪಿ ಗೊಬ್ಬರಕ್ಕೆ ತೀವ್ರ ಕೊರತೆಯಿದೆ. ಅಲ್ಪ ಸ್ವಲ್ಪ ಬಂದರೂ ಒಂದೆರಡು ಗಂಟೆಗಳಲ್ಲಿ ಖಾಲಿಯಾಗಿಬಿಡುತ್ತದೆ. ಬಿತ್ತನೆ ಕಾರ್ಯಕ್ಕೆ ಡಿಎಪಿ ಸಿಗದಂತಾಗಿದೆ’ ಎನ್ನುತ್ತಾರೆ ರೈತ ರಂಜಿತ್.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು