ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಕೆ.ಎಚ್. ಮುನಿಯಪ್ಪ ವಿರೋಧಿಗಳಿಗೆ ಮಾದಿಗ ಸಮುದಾಯದ ಮುಖಂಡರ ಎಚ್ಚರಿಕೆ

‘ಮಾದಿಗರ ಆತ್ಮಸಾಕ್ಷಿ ಕೆಣಕದಿರಿ’
Published 27 ಮಾರ್ಚ್ 2024, 12:56 IST
Last Updated 27 ಮಾರ್ಚ್ 2024, 12:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಸಚಿವ ಕೆ.ಎಚ್.ಮುನಿಯಪ್ಪ ಅವರು ಸೂಚಿಸುವ ವ್ಯಕ್ತಿಗೆ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಮಾದಿಗ ಸಮುದಾಯದ ಆತ್ಮಸಾಕ್ಷಿ ಕೆಣಕುವುದಕ್ಕೆ ಕೈ ಹಾಕಬೇಡಿ ಎಂದು ಕೆ.ಎಚ್.ಮುನಿಯಪ್ಪ ವಿರೋಧಿಗಳಿಗೆ ಮಾದಿಗ ಸಮುದಾಯದ ಮುಖಂಡರು ಎಚ್ಚರಿಸಿದರು. 

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮುದಾಯದ ಮುಖಂಡ ಪಟ್ರೇನಹಳ್ಳಿ ಕೃಷ್ಣ, ಕೆ.ಎಚ್.ಮುನಿಯಪ್ಪ ನಮ್ಮ ಸಮುದಾಯದ ಬಹುದೊಡ್ಡ ನಾಯಕರು. ನಮ್ಮ ಸಮಾಜವನ್ನು ಪ್ರತಿನಿಧಿಸುತ್ತಿದ್ದಾರೆ. 7 ಬಾರಿ ಕೋಲಾರ ಸಂಸದ ಹಾಗೂ ಕೇಂದ್ರದಲ್ಲಿ ಸಚಿವರೂ ಆಗಿದ್ದರು ಎಂದರು. 

ಈ ಕ್ಷೇತ್ರದ ಪ್ರತಿಬೂತ್ ಅಲ್ಲಿನ ಸ್ಥಿತಿಗತಿ ಮುನಿಯಪ್ಪ ಅವರಿಗೆ ಗೊತ್ತು. ಆದ್ದರಿಂದ ಅವರು ಸೂಚಿಸುವ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡುತ್ತೇವೆ ಎಂದರು. 

ಮುನಿಯಪ್ಪ ಅವರ ಕಡೆಯವರಿಗೆ ಟಿಕೆಟ್ ನೀಡಿದರೆ ರಾಜೀನಾಮೆ ನೀಡುತ್ತೇವೆ ಎನ್ನುವ ಸಚಿವರು ಮತ್ತು ಶಾಸಕರ ಹೇಳಿಕೆಗಳು ಅವರಿಗೆ ಶುಭ ತರುವುದಿಲ್ಲ. ರಾಜೀನಾಮೆ ಹೆಸರಿನಲ್ಲಿ ಪಕ್ಷವನ್ನು ಮತ್ತು ನಮ್ಮ ಸಮುದಾಯದ ನಾಯಕರನ್ನು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಿದ್ದಾರೆ. ಕೋಲಾರದಲ್ಲಿ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕು. ಕಾಂಗ್ರೆಸ್‌ನ ಕೆಲವರು ಎಡ ಬಲ ನಮ್ಮ ನಡುವೆ ಒಡಕು ತಂದಿದ್ದಾರೆ ಎಂದು ದೂರಿದರು. 

ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ದಿನ್ನೆಹೊಸಹಳ್ಳಿ ಎಂ ಪೆದ್ದಣ್ಣ ಮಾತನಾಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಡಗೈ ಬಲಗೈ ಎಂಬ ತಾರತಮ್ಯ ಇರಲಿಲ್ಲ. ನಮ್ಮ ಒಗ್ಗಟ್ಟನ್ನು ನಾಶ ಮಾಡುವ ಉದ್ದೇಶದಿಂದಲೇ ಕೆಲ ರಾಜಕಾರಣಿಗಳು ಟಿಕೆಟ್ ಘೋಷಣೆ ಮಾಡುವ ಸಂದರ್ಭದಲ್ಲಿ ಎಡ ಬಲ ಎನ್ನುತ್ತಿದ್ದಾರೆ. ಮಾದಿಗರು ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಯಾರ ಪರವಾಗಿ ಇರುತ್ತಾರೊ ಅವರು ಅಧಿಕಾರಕ್ಕೆ ಬರುತ್ತಾರೆ ಎನ್ನುವುದನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರು ತಿಳಿಯಬೇಕು ಎಂದರು. 

ಮುಖಂಡ ಮುನಿಕೃಷ್ಣಪ್ಪ ಮಾತನಾಡಿ, ರಾಜ್ಯ ಮತ್ತು ದೇಶದ ರಾಜಕಾರಣದಲ್ಲಿ ಕೆ.ಎಚ್.ಮುನಿಯಪ್ಪ ಅವರ ಕುಟುಂಬ ಮಾತ್ರವೇ ಇಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರದ ಎಲ್ಲ ಮಾಹಿತಿ ಅವರ ಬಳಿ ಇದೆ. ಆದ್ದರಿಂದ ಅವರು ಸೂಚಿಸುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT