ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

Last Updated 25 ಜನವರಿ 2021, 4:55 IST
ಅಕ್ಷರ ಗಾತ್ರ

ಚೇಳೂರು: ಇಲ್ಲಿನ ಚೇಳೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.

ಚೇಳೂರು ಗ್ರಾ.ಪಂ. ಅಧಿಕಾರಿ ಕೆ.ಎನ್.ಹರೀಶ್ ಮಾತನಾಡಿ, ‘ಹೆಣ್ಣು ಮಗು ಮನೆಯ ನಂದಾ ದೀಪ. ಅದನ್ನು ಯಾವಾಗಲೂ ಬೆಳಗಲು ಬಿಡಿ ಹೆಣ್ಣನ್ನು ಉಳಿಸಿ, ಬೆಳಸಿ, ಕಲಿಸಿ. ಹೆಣ್ಣು ಇರುವ ಮನೆಯು ನಂದಗೋಕುಲದಂತೆ. ಸಮಾಜದಲ್ಲಿ ಪ್ರತಿಯೊಂದು ಕಾರ್ಯಕ್ರಮವು ಸಹ ಹೆಣ್ಣು ಮಕ್ಕಳನ್ನ ಪ್ರತಿಭಾವಂತರನ್ನಾಗಿ, ಪ್ರಭಾವಿಗಳನ್ನಾಗಿ ಮಾಡಲು ಸರ್ಕಾರವೇ ಮೀಸಲಾತಿ ನೀಡುತ್ತಲೇ ಬಂದಿದೆ’ ಎಂದರು.

‘ಶಿಕ್ಷಣವು ವ್ಯಕ್ತಿಯ ಜೀವನದಲ್ಲಿ ಬೆಳಕು ತೋರಿಸುತ್ತದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣು ಮಕ್ಕಳನ್ನು ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸಮಾನವಾಗಿ ಕಾಣಬೇಕು’ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಟಿ.ವೆಂಕಟರವಣಪ್ಪ ಮಾತನಾಡಿ, ‘ಉತ್ತಮ ಸಮಾಜ ನಿರ್ಮಿಸುವಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸಹ ಪ್ರಮುಖ ಪಾತ್ರ ವಹಿಸಬೇಕು. ಈ ಸಮಾಜದಲ್ಲಿ ಎಲ್ಲರು ಸಮಾನರೇ, ಎಲ್ಲರೂ ಸಮಾನವಾಗಿ ಬಾಳಬೇಕು, ಒಳ್ಳೆಯ ಅಭಿಮಾನ ಬೆಳೆಸಿಕೊಳ್ಳಬೇಕು. ಉನ್ನತ ಗುಣಗಳನ್ನು ಬೆಳಸಿಕೊಂಡು ಉತ್ತಮವಾದ ದೇಶ ನಾಯಕರಾಗಿ, ಆದರ್ಶವ್ಯಕ್ತಿಗಳನ್ನು ಮಾದರಿಯಾಗಿಸಿಕೊಂಡು ಬೆಳೆಯಬೇಕು’ ಎಂದರು.

‘ಈ ಸಮಾಜದಲ್ಲಿ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಸಹ ಮುಂದುವರೆಯುತ್ತಿದ್ದಾರೆ. ಚಾಲಕನಿಂದ ಹಿಡಿದು ಪೈಲೆಟ್‌ವವರೆಗೂ ಪುರುಷರ ಸರಿ-ಸಮಾನವಾಗಿ ಮುಂದುವರೆಯುತ್ತಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರೊಡನೆ ಹೋರಾಡಿದ ಪ್ರಪ್ರಥಮ ಮಹಿಳೆ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ. ಸಾವಿತ್ರಿಬಾಯಿ ಫುಲೆ ಅವರು ದಿಟ್ಟತನದಿಂದ ಅಂಧ ಸಂಪ್ರದಾಯ ಹಾಗೂ ಮೌಢ್ಯ ವಿರೋಧಿಯಾಗಿದ್ದರು. ದೇಶದ ಮೊದಲ ಶಿಕ್ಷಕಿಯಾಗಿ ಹಲವಾರು ಹೆಣ್ಣು ಮಕ್ಕಳ ಬಾಳಿಗೆ ವಿದ್ಯಾದಾನ ಮಾಡಿದರು. ನೀವು ಅಂತಹವರ ಗುಣಗಳು ಮೈಗೂಡಿಸಿಕೊಳ್ಳಬೇಕಾಗಿದೆ’ ಎಂದು ಕಿವಿಮಾತು ಹೇಳಿದರು.

ಗ್ರಾ.ಪಂ.ಯ ಕಾರ್ಯದರ್ಶಿ ಪ್ರವೀಣ್, ಕರವಸೂಲಿಗಾರ ಪಿ.ಎನ್ ಮಂಜುನಾಥ, ಪಿ.ಎ.ಮುರಳಿಕೃಷ್ಣ, ಸಂಪೂನ್ಮೂಲ ವ್ಯಕ್ತಿ ಕೆ.ಶ್ರೀನಿವಾಸರೆಡ್ಡಿ, ಶಾಲೆಯ ಸಹಶಿಕ್ಷಕರಾದ ಐ.ವಿ.ಕೃಷ್ಣಾರೆಡ್ಡಿ, ಪಿ.ಎನ್.ಸರಸ್ಪತಮ್ಮ, ಎನ್.ವಿ.ರಘುನಾಥರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT