ಮಂಗಳವಾರ, ಅಕ್ಟೋಬರ್ 15, 2019
26 °C
ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರ ಸಮ್ಮುಖದಲ್ಲಿ ಕೆಸರಿ ಪಾಳೆಯಕ್ಕೆ ಸೇರ್ಪಡೆ

ಬಾಗೇಪಲ್ಲಿ ಕೆಲ ಮುಖಂಡರು ಬಿಜೆಪಿಗೆ

Published:
Updated:
Prajavani

ಚಿಕ್ಕಬಳ್ಳಾಪುರ: ಬೆಂಗಳೂರಿನ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಗುರುವಾರ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರ ಸಮ್ಮುಖದಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ವಿರೋಧ ಪಕ್ಷದ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು.

ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕಟೇಶ್‌, ತಿಮ್ಮಪಲ್ಲಿಯ ಶ್ರೀನಿವಾಸ್, ಘಂಟಂವಾರಪಲ್ಲಿಯ ಗಂಗಾಧರಪ್ಪ, ನಾರೇಮದ್ದೆಪಲ್ಲಿಯ ರಾಘು ಸೇರಿದಂತೆ ತಿಮ್ಮಪಲ್ಲಿ, ಘಂಟವಾರಪಲ್ಲಿ, ನಾರೇಮದ್ದೆಪಲ್ಲಿ, ರಾಚ್ಚೇರುವು, ತೊಳಪಲ್ಲಿ, ಮದ್ದೆಪಲ್ಲಿ, ಗೋರ್ತುಪಲ್ಲಿ, ಮುಸಿನಗಾನಪಲ್ಲಿ, ನಂಬರೆಡ್ಡಿಪಲ್ಲಿ, ಮಾಮಿಡಿಕಾಯಪಲ್ಲಿ, ಮಂಕಲಪಲ್ಲಿ ಸೇರಿದಂತೆ ವಿವಿಧ ಗ್ರಾಮಗಳ ಸುಮಾರು 30ಕ್ಕೂ ಅಧಿಕ ಮುಖಂಡರನ್ನು ಸಚಿವ ರವಿ ಅವರು ಪಕ್ಷಕ್ಕೆ ಬರಮಾಡಿಕೊಂಡರು.

ಬೆಂಗಳೂರು ಗ್ರಾಮಾಂತರ ವಿಭಾಗ ಪ್ರಭಾರಿ ಗೀತಾ ವಿವೇಕಾನಂದ, ಸಹ ಪ್ರಭಾರಿ ಶಿವಕುಮಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ, ಮುಖಂಡ ಚಲವಾದಿ ನಾರಾಯಣ ಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Post Comments (+)