ಶುಕ್ರವಾರ, ಆಗಸ್ಟ್ 6, 2021
22 °C
16 ತಿಂಗಳಿನಿಂದ ವಾಟರ್‌ಮನ್‌ ವೇತನ ಬಾಕಿ: ಆರೋಪ

ಮುಮ್ಮನಹಳ್ಳಿ: ಸಮರ್ಪಕ ನೀರು ಪೂರೈಕೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾದಲಿ: ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಪಲಿಚೇರ್ಲು ಗ್ರಾಮ ಪಂಚಾಯಿತಿಯ ಮುಮ್ಮನಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಎದುರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.

ಮುಮ್ಮನಹಳ್ಳಿಯ ವಾಟರ್‌ಮೆನ್‌ ವೆಂಕಟೇಶ್ ಅವರಿಗೆ 16 ತಿಂಗಳಿನಿಂದಲೂ ಸಂಬಳ ಬಾಕಿ ಇದೆ. ಹಾಗಾಗಿ ಅವರ ನೀರು ಬಿಡುವುದನ್ನು ನಿಲ್ಲಿಸಿದ್ದಾರೆ. ಹಾಗಾಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದರು.

ನೀರು ಬಿಡುವಂತೆ ಗ್ರಾಮಸ್ಥರು ಕೇಳಿದ್ದು ‘ಸಂಬಳ ಕೊಡಿಸಿ ಅದುವರೆಗೆ ನೀರು ಬಿಡುವುದಿಲ್ಲ’ ಎಂದಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು.

ಪಂಚಾಯಿತಿ ಅಧ್ಯಕ್ಷ ಗೋಪಿನಾಥ್ ಹಾಗೂ ಪಿಡಿಒ ಕಾತ್ಯಾಯಿನಿ ಪ್ರತಿಕ್ರಿಯಿಸಿ, ಜಲಗಂಟಿಗೆ ವೇತನ ನೀಡಲಾಗುವುದು. ಸಮರ್ಪಕವಾಗಿ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ನರಸಪ್ಪ, ಸುಬ್ಬಾರೆಡ್ಡಿ, ನರಸರೆಡ್ಡಿ, ಗಂಗಪ್ಪ, ವೆಂಕಟೇಶ್‍ರೆಡ್ಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು