ಬಾಗೇಪಲ್ಲಿ: ಕನ್ನಡ, ಇಂಗ್ಲಿಷ್ ಮಾಧ್ಯಮದಲ್ಲಿ ಎಲ್ಕೆಜಿ, ಯುಕೆಜಿ ಶಿಕ್ಷಣ, ಗುಣಮಟ್ಟದ ಕಲಿಕಾ ವಾತಾವರಣ, ಮಕ್ಕಳಿಗೆ ಆಟದ ಜೊತೆ ಪಾಠ, ಮುಖ್ಯಶಿಕ್ಷಕ, ಶಿಕ್ಷಕ, ಶಿಕ್ಷಕಿಯರ ಶ್ರಮ ಆಕರ್ಷಕವಾದ ಸುಣ್ಣ ಬಣ್ಣದ ಕೊಠಡಿ, ಕೈ ಬೀಸಿ ಕರೆಯುವ ಗೋಡೆಬರಹ, ಕರಾಟೆ, ಆಟಗಳು ಸೇರಿದಂತೆ ವಿವಿಧ ಸೌಲಭ್ಯಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಹೆಚ್ಚಾಗಿ ಮೂಲ ಸೌಲಭ್ಯಗಳು ಹೊಂದಿದ ಪಟ್ಟಣದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತಾಲ್ಲೂಕಿನಲ್ಲಿಯೇ ಹೆಚ್ಚು ವಿದ್ಯಾರ್ಥಿನಿಯರು ದಾಖಲಾಗಿರುವ ಶಾಲೆ ಆಗಿದೆ.

ಶಾಸಕರ ದತ್ತು ಶಾಲೆ, ಅತ್ಯಾಧುನಿಕ ಮಾದರಿಯ ಶೌಚಾಲಯ, ಮಳೆನೀರು ಸಂಗ್ರಹ, ಆಟದ ಮೈದಾನ, ಬಯಲು ರಂಗಮಂದಿರ, ಉಚಿತ ಶಿಕ್ಷಣದ ಜೊತೆಗೆ ಪಠ್ಯಪುಸ್ತಕ, ಖಾಸಗಿ ಸಂಸ್ಥೆಗಳಿಂದ ಟ್ಯಾಬ್, ಪ್ರೊಜೆಕ್ಟರ್ ಮೂಲಕ ಬೋಧನೆ ಮಾಡಲಾಗುತ್ತಿದೆ.

ಹೈಟೆಕ್ ಸೌಲಭ್ಯ ಹೊಂದಿದ ಶಾಲೆಯಲ್ಲಿ ಹಿಂದಿನ ಶೈಕ್ಷಣಿಕ ವರ್ಷಕ್ಕಿಂತ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 100ಕ್ಕೂ ಹೆಚ್ಚು ಹೊರರಾಜ್ಯ ಸೇರಿದಂತೆ ಪಟ್ಟಣ ಹಾಗೂ ಗ್ರಾಮೀಣ ಮಕ್ಕಳು ದಾಖಲಾತಿ ಪಡೆದಿದ್ದಾರೆ.

2024-25ನೇ ಸಾಲಿನಲ್ಲಿ ಎಲ್ಕೆಜಿ, ಯುಕೆಜಿ ಸೇರಿದಂತೆ 8ನೇ ತರಗತಿವರೆಗೆ 470 ವಿದ್ಯಾರ್ಥಿನಿಯರು ಕಲಿತಿದ್ದಾರೆ. ಶಾಲೆಯಲ್ಲಿನ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಜೂನ್ 12 ರವರೆಗೆ ಎಲ್ಕೆಜಿ 25, ಯುಕೆಜಿ 25, 1ನೇ ತರಗತಿಯಲ್ಲಿ 29, 2 ನೇ 13, 3ನೇ 30, 4ನೇ 45, 5ನೇ 45, 6ನೇ 84, 7ನೇ 73, 8ನೇ ತರಗತಿಯಲ್ಲಿ 113 ಮಂದಿ ವಿದ್ಯಾರ್ಥಿನಿಯರು ಇದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇದುವರೆಗೆ 550 ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಜೂನ್ ತಿಂಗಳ ಕೊನೆಯ ವಾರಕ್ಕೆ 50 ವಿದ್ಯಾರ್ಥಿನಿಯರು ದಾಖಲಾಗಲು ಪೋಷಕರು ಉತ್ಸುಕರಾಗಿದ್ದರು. ಶಾಲೆಯಲ್ಲಿ ಸಂಗೀತ, ಕರಕುಶಲ, ಕಂಪ್ಯೂಟರ್, ಕರಾಟೆ ಸೇರಿದಂತೆ ವಿಷಯವಾರು 25 ಶಿಕ್ಷಕ, ಶಿಕ್ಷಕಿಯರು ಕೆಲಸ ನಿರ್ವಹಿಸುತ್ತಿದ್ದಾರೆ.

ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾದ ಪಿಎಂಶ್ರೀ ಬಾಲಕಿಯರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾಡಲಾಗಿದೆ. ರಾಜ್ಯ ಸರ್ಕಾರದ ಯೋಜನೆಗಳಿಗೆ ಅನುದಾನಗಳ ಜೊತೆಗೆ ಕೇಂದ್ರ ಸರ್ಕಾರದ ಅನುದಾನಗಳು ಶಾಲೆಗೆ ಬರುತ್ತಿದೆ.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ದತ್ತು ಪಡೆದ ಸರ್ಕಾರಿ ಶಾಲೆ ಆಗಿದೆ. 20ಕ್ಕೂ ಹೆಚ್ಚು ಕೊಠಡಿಗಳು ಇವೆ. ಶಾಲಾ ಕಟ್ಟಡ ಹಾಗೂ ಕೊಠಡಿಗಳಿಗೆ ಸುಣ್ಣ, ಬಣ್ಣ ಬಳಿದು ಅಕ್ಷರಮಾಲೆ, ಕಾಗುಣಿತ, ಅಂಕಿಗಳ ಗೋಡೆಬರಹ ಮಕ್ಕಳನ್ನು ಆಕರ್ಷಿಸುತ್ತಿದೆ. ಶಾಲೆ ಮುಂದೆ ಆಟದ ಮೈದಾನ, ಉಯ್ಯಾಲೆ, ಜಾರುಬಂಡೆ ಸೇರಿದಂತೆ ವಿವಿಧ ಆಟದ ಪರಿಕರ ಇದೆ.

ಬೆಂಗಳೂರಿನ ಸೆಹಗಲ್ ಫೌಂಡೇಷನ್ ವತಿಯಿಂದ 1 ಲಕ್ಷ ಲೀಟರ್ನ ನೀರಿನ ತೊಟ್ಟಿ, ಮಳೆನೀರು ಸಂಗ್ರಹ ಮಾಡಲಾಗಿದೆ. 2 ಮಹಡಿಗಳ ಶೌಚಾಲಯ ನಿರ್ಮಿಸಲಾಗಿದೆ. ಮೈಸೂರು ಪ್ರಥಮ ಸಂಸ್ಥೆಯಿಂದ ಹಾಗೂ ದಾನಿಗಳ ನೆರವಿನಲ್ಲಿ 15 ಕಂಪ್ಯೂಟರ್ ಇವೆ. ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಅತ್ಯಾಧುನಿಕ ರೀತಿಯಲ್ಲಿ ಶಾಲಾ ಕಚೇರಿ, ಕುರ್ಚಿ, ಟೇಬಲ್, ಕಂಪ್ಯೂಟರ್ ನೀಡಿದ್ದಾರೆ.

ವಿದ್ಯಾರ್ಥಿನಿಯರಿಗೆ ಪ್ರತಿ ಶನಿವಾರ ಕರಾಟೆ, ಕರಕುಶಲ, ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ. ವಿಜ್ಞಾನ ಮೇಳ, ಗಣಿತ ಮೇಳ, ಮಕ್ಕಳ ಸಂತೆ ನಡೆಯುತ್ತದೆ. ರಾಷ್ಟ್ರೀಯ ಆವಿಷ್ಕಾರ, ತಾಲ್ಲೂಕು, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗಳಲ್ಲಿ ಭಾಗವಹಿಸಿ ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.

ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳನ್ನು ಗುರುತಿಸಿ ಶಾಲೆಗೆ ದಾಖಲಿಸಲಾಗಿದೆ. ಉತ್ತಮ ಗ್ರಂಥಾಲಯ ಇದೆ. ಮಕ್ಕಳ, ಮಹನೀಯರ, ಕಥೆ ಪುಸ್ತಕಗಳನ್ನು ಹಾಗೂ ದಿನಪತ್ರಿಕೆಗಳನ್ನು ಓದು ಹವ್ಯಾಸ ಮಾಡಿಸಿದ್ದಾರೆ ಎಂದು ಶಾಲಾ ಹಿರಿಯ ಶಿಕ್ಷಕಿ ಧರ್ಮಪುತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದೇವೆ. ಪಿಎಂಶ್ರೀ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡಿಸಿದೆ. ಮಗಳು ಉತ್ತಮವಾಗಿ ಕಲಿಯುತ್ತಿದ್ದಾಳೆ.
– ಚಂದ್ರಪ್ಪ, ಪೋಷಕ

ಮಗುವಿಗೆ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಕರು ಬೋಧಿಸುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ನಮ್ಮೂರಿನ ಸರ್ಕಾರಿ ಶಾಲೆ ಮೇಲು.
– ಉಷಾ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ದತ್ತು ಪಡೆದ ಪಿಎಂಶ್ರೀ ಸರ್ಕಾರಿ ಶಾಲೆಗೆ ಅನುದಾನ ಹಾಗೂ ದಾನಿಗಳ ನೆರವಿನಲ್ಲಿ ಹೆಣ್ಣುಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಮಾಡಲಾಗುತ್ತಿದೆ.
– ಆರ್.ಹನುಮಂತರೆಡ್ಡಿ, ಮುಖ್ಯಶಿಕ್ಷಕ

ಪ್ರಸಕ್ತ ವರ್ಷದಲ್ಲಿ 100ಹೆಣ್ಣುಮಕ್ಕಳು ಶಾಲೆಗೆ ದಾಖಲಾಗಿದ್ದಾರೆ. ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಮಕ್ಕಳು ದಾಖಲಾಗಿರುವುದು ಹೆಮ್ಮೆ ಎನಿಸಿದೆ.
– ವೈಎಂ.ಮಂಜುನಾಥರೆಡ್ಡಿ, ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.