ಚಿಂತಾಮಣಿ: ಪ್ರತಿಭಾ ಕಾರಂಜಿ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಹೊರಗಡೆ ತೆಗೆಯಲು ಪ್ರಯತ್ನ ನಿರಂತರವಾಗಿ ನಡೆಯಬೇಕು ಎಂದು ಶಿಕ್ಷಣ ಸಂಯೋಜಕ ನಾಗೇಶ್ ಹೇಳಿದರು.

ಚಿಲಕಲಾನೇರ್ಪು ಹೋಬಳಿ, ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಕ್ಕೆ ಏನಿಗದಲೆರಾಮಕೃಷ್ಣ ಶಾಲೆಯಲ್ಲಿ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಚಿಲಕಲನೇರ್ಪು ಸಿಆರ್ಪಿ ರಾಮಚಂದ್ರಪ್ಪ ಮಾತನಾಡಿ, ಸರ್ಕಾರ 2002ರಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. 23 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡ ಬರುತ್ತಿದೆ. ಮಕ್ಕಳ ಪ್ರತಿಭೆ ಹೊರತರಲು ಉತ್ತಮ ವೇದಿಕೆ ಎಂದು ಹೇಳಿದರು.

ರಾಮಕೃಷ್ಣ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಾಲಾಜಿ ಅಧ್ಯಕ್ಷತೆ ಮಾತನಾಡಿ, ಪ್ರತಿಭಾಕಾರಂಜಿ ಮಕ್ಕಳಲ್ಲಿ ಅಡಗಿದ ಭಯ, ನಾಚಿಕೆ ಸ್ವಭಾವವನ್ನು ದೂರ ಮಾಡುತ್ತದೆ. ವಿಶೇಷ ಪ್ರತಿಭೆಯನ್ನು ಹೊರತೆಗೆದು ಉನ್ನತ ಸಾಧನೆ ಮಾಡಲು ಸಹಾಯ ಮಾಡುತ್ತದೆ ಎಂದರು.

ಸಂಸ್ಕೃತ, ಅರೇಬಿಕ್ ಧಾರ್ಮಿಕ ಪಠಣ, ಕನ್ನಡ, ಇಂಗ್ಲಿಷ್, ಹಿಂದಿ ಭಾಷಣ, ಭಕ್ತಿಗೀತೆ, ಜಾನಪದ ಗೀತೆ, ಭಾವಗೀತೆ ಹಾಡುವ, ಕ್ಲೇ ಮಾಡಲಿಂಗ್, ಚದ್ಮವೇಷ, ಕವ್ವಾಲಿ, ಗಝಲ್, ಜಾನಪದ ನೃತ್ಯ, ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಎಲ್ಲಾ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ವಿತರಿಸಲಾಯಿತು.

ಕೈವಾರ ಹೋಬಳಿ ಇಸಿಒ ನಾಗೇಶ್, ನಂಜುಂಡೇಗೌಡ, ಸುಧಾಕರ್, ಪದ್ಮನಾಭಚಾರಿ, ರಾಜಣ್ಣ, ಸುರೇಶ ಬಾಬು, ಶ್ರೀಧರ್ ಹಿರೇಮಠ್, ಶೋಭಾ, ವಾಣಿ ಮಂಜುನಾಥ್, ಶೋಭಾ, ಕಲ್ಪನಾ, ನಾಗರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.