ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಮಳ್ಳೂರು: ಅಪರೂಪದ ‘ರಾಮ ಟಂಕಾ’ ನಾಣ್ಯಕ್ಕೆ ತಲೆಮಾರುಗಳಿಂದ ಪೂಜೆ

Published 23 ಜನವರಿ 2024, 4:46 IST
Last Updated 23 ಜನವರಿ 2024, 4:46 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಅಪರೂಪದ ‘ರಾಮ ಟಂಕಾ’ ಬೆಳ್ಳಿ ನಾಣ್ಯವನ್ನು ಸುಮಾರು ಮೂರು ತಲೆಮಾರುಗಳಿಂದ ಪೂಜಿಸುತ್ತಾ ಬರಲಾಗಿದೆ.

83 ವಯಸ್ಸಿನ ನಿವೃತ್ತ ಶಿಕ್ಷಕ ಎ.ವೆಂಕೋಬರಾವ್ ಅವರು ತಮ್ಮ ಮನೆಯಲ್ಲಿ ತಮ್ಮ ಮುತ್ತಾತನ ಕಾಲದಿಂದಲೂ ಸಾಲಿಗ್ರಾಮದ ಜತೆಯಲ್ಲಿಟ್ಟು ಈ ರಾಮ ಟಂಕಾ ಬೆಳ್ಳಿ ನಾಣ್ಯಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.

‘ನಾವು ಶಾನುಭೋಗರ ಮನೆತನದವರು. ನಮ್ಮ ತಂದೆ ಅಶ್ವತ್ಥಯ್ಯ, ತಾತ ವೆಂಕಣ್ಣ ಮತ್ತು ಮುತ್ತಾತ ಅಶ್ವತ್ಥಪ್ಪ. ನಮ್ಮ ಹಿಂದಿನ ಮೂರು ತಲೆಮಾರಿನಿಂದಲೂ ಈ ರಾಮ ಟಂಕಾ ಬೆಳ್ಳಿ ನಾಣ್ಯವನ್ನು ಪೂಜಿಸುತ್ತಿದ್ದೇವೆ. ಇದು ವಿಜಯನಗರದ ಕಾಲದ್ದು’ ಎಂದು ಎ.ವೆಂಕೋಬರಾವ್ ತಿಳಿಸಿದರು.

ಎ.ವೆಂಕೋಬರಾವ್ ಅವರ ಬಳಿ ಇರುವ ರಾಮ ಟಂಕಾ ಬೆಳ್ಳಿ ನಾಣ್ಯದ ಒಂದು ಕಡೆ ರಾಮನ ಪಟ್ಟಾಭಿಷೇಕದ ಚಿತ್ರಣವಿದ್ದರೆ, ಮತ್ತೊಂದು ಕಡೆ ರಾಮ ಲಕ್ಷ್ಮಣ ಚಿತ್ರವಿದೆ. ರಾಮ ಲಕ್ಷ್ಮಣ ಇಬ್ಬರೂ ಧೋತಿ ಧರಿಸಿ, ತಲೆಯ ಮೇಲೆ ಕಿರೀಟಧಾರಿಗಳಾಗಿ, ಎಡಗೈಯಲ್ಲಿ ಬಿಲ್ಲನ್ನು ಹಿಡಿದಿದ್ದಾರೆ. ರಾಮ ತನ್ನ ಬಲಗೈಯಲ್ಲಿ ತ್ರಿಶೂಲ ಹಿಡಿದಿದ್ದಾನೆ. ಅವರ ಸುತ್ತ ಸಂಸ್ಕೃತದಲ್ಲಿ ‘ರಾಮ ಲಚಮಣ ಜಾನಕ ಜವತ ಹನಮನಕ’ (ವಿಜಯಶಾಲಿಯಾದ ರಾಮ, ಲಕ್ಷ್ಮಣ, ಸೀತಾ ಮತ್ತು ಹನುಮಂತ) ಹಾಗೂ ಇಸವಿ 1700 ಎಂದಿದೆ.

ನಾಣ್ಯ ಸಂಗ್ರಹಕಾರ ಎಚ್.ಕೆ.ರಾಮರಾವ್ ಅವರು ರಾಮ ಟಂಕಾ ಕುರಿತು ಮಾಹಿತಿ ನೀಡಿ, ರಾಮ ಟಂಕಾಗಳು ನಿಜವಾಗಿಯೂ ನಾಣ್ಯಗಳಲ್ಲ. ಆಯಾ ಕಾಲಘಟ್ಟದಲ್ಲಿ ಹಿಂದೂ ರಾಜರುಗಳು ಹಾಗೂ ಕೆಲವು ದೇವಾಲಯಗಳು ರಾಮನ ಗೌರವಾರ್ಥವಾಗಿ ಮುದ್ರಿಸಿದ ಟೋಕನ್(ಸ್ಮರಣಿಕೆ) ಗಳು. ಹನ್ನೆರಡನೆಯ ಶತಮಾನದಲ್ಲಿ ಮೊಟ್ಟಮೊದಲು ಮುದ್ರಿಸಲಾಗಿತ್ತು. ವಿಜಯನಗರದ ಅರಸರ ಕಾಲದಲ್ಲಿಯೂ ಮುದ್ರಿಸಿದ್ದ ರಾಮ ಟಂಕಾ ಬೆಳ್ಳಿ ಟೋಕನ್‌ಗಳನ್ನು ವಿವಿಧ ವಸ್ತುಗಳ ವಿನಿಮಯಕ್ಕೆ ಬಳಸುತ್ತಿದ್ದುದರ ದಾಖಲೆಯಿದೆ ಎಂದು ಹೇಳಿದರು.

“ರಾಮ ಟಂಕಾ” ಬೆಳ್ಳಿ ನಾಣ್ಯ
“ರಾಮ ಟಂಕಾ” ಬೆಳ್ಳಿ ನಾಣ್ಯ
“ರಾಮ ಟಂಕಾ” ಬೆಳ್ಳಿ ನಾಣ್ಯ
“ರಾಮ ಟಂಕಾ” ಬೆಳ್ಳಿ ನಾಣ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT