ಬಿಳ್ಳೂರು ಶಿವಪುರ ಮತ್ತು ಬಿಳ್ಳೂರು ಚಾಕವೇಲು ರಸ್ತೆ ಸಮಸ್ಯೆ ವಿಷಯ ನಮ್ಮ ಗಮನಕ್ಕೆ ಬಂದಿದೆ. ಈಗಾಗಲೇ ರಸ್ತೆ ದುರಸ್ತಿ ಕಾಮಗಾರಿಗಳನ್ನು ಪ್ರಾರಂಭಿಸಿದ್ದೇವೆ. ಕೆಲವೇ ದಿನಗಳಲ್ಲಿ ತಾಲ್ಲೂಕಿನ ಎಲ್ಲ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲಾಗುವುದು. ಅರುಣಾಚಲ ಎಇಇ ಲೋಕೋಪಯೋಗಿ ಇಲಾಖೆ ಬಾಗೇಪಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ನಮ್ಮ ಭಾಗದ ರಸ್ತೆ ಸಮಸ್ಯೆಯನ್ನು ಪರಿಹರಿಸಲು ಯಾರೂ ಕಾಳಜಿ ತೋರದಿರುವುದು ದುರದೃಷ್ಟ. ಚುನಾವಣೆ ಸಮಯದಲ್ಲಿ ಮಾತ್ರ ಭರವಸೆಗಳನ್ನು ನೀಡುತ್ತಾರೆ. ನಂತರ ಯಾರೂ ನಮ್ಮ ಕಡೆ ತಿರುಗಿ ನೋಡುವುದಿಲ್ಲ. ವಿನಯ್ ಬಿಳ್ಳೂರು ನಿವಾಸಿ ರಸ್ತೆಗಳು ತುಂಬಾ ಹದೆಗಿಟ್ಟಿವೆ. ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಪರದಾಡುವಂತಾಗಿದೆ. ವಾಹನ ಸವಾರರು ಮುಖ್ಯವಾಗಿ ದ್ವಿಚಕ್ರವಾಹನ ಸವಾರರು ಮಳೆಗಾಲದಲ್ಲಿ ರಸ್ತೆ ಯಾವುದು ಗುಂಡಿಯ ಯಾವುದು ಎಂದು ಗೊತ್ತಾಗದೆ ಅನೇಕ ಬಾರಿ ಗುಂಡಿಗೆ ಬಿದ್ದು ಅಪಘಾತಕ್ಕೀಡಾಗಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ. ಎಂ.ಎಸ್.ನರಸಿಂಹಾರೆಡ್ಡಿ ರೈತ ಸಂಘದ ಮುಖಂಡ