ಮಂಗಳವಾರ, ಮಾರ್ಚ್ 21, 2023
20 °C
ರಾತ್ರಿ 9ರವರೆಗೆ ವಹಿವಾಟಿಗೆ ಅವಕಾಶ

ನಿಯಮ ಸಡಿಲ: ಇಂದು ದೇಗುಲಗಳಲ್ಲಿ ಸ್ವಚ್ಛತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ದೇವಸ್ಥಾನಗಳು, ಮಾಲ್‌ಗಳ ಪ್ರವೇಶಕ್ಕೆ ಅವಕಾಶ ಸೇರಿದಂತೆ ಕೋವಿಡ್‌ನ ಕಠಿಣ ನಿಯಮಗಳನ್ನು ಸರ್ಕಾರ ಸಡಿಲಿಸಿದೆ. ಇದು ಭಕ್ತರಲ್ಲಿ ಸಂತಸಕ್ಕೆ ಕಾರಣವಾಗಿದೆ.

ದೇವಸ್ಥಾನಗಳ ಆಡಳಿತ ಮಂಡಳಿಯವರು, ಅರ್ಚಕರು ಸೋಮವಾರ ಬೆಳಿಗ್ಗೆ ದೇಗುಲಗಳಲ್ಲಿ ಸ್ವಚ್ಛತೆ ಕೈಗೊಳ್ಳಲು ನಿರ್ಧರಿಸಿದ್ದಾರೆ. ಬಹಳ ದಿನಗಳಿಂದ ಭಕ್ತರ ಪ್ರವೇಶವಿಲ್ಲದೆ ಭಣಗುಡುತ್ತಿದ್ದ ದೇಗುಲಗಳಿಗೆ ಭಕ್ತರು ಪ್ರವೇಶಿಸುವ ಹಿನ್ನೆಲೆಯಲ್ಲಿ ಸಿದ್ಧತೆ ಮತ್ತು ಸ್ವಚ್ಛತೆ ಜರುಗಲಿದೆ.

‘ದೇಗುಲಗಳಿಗೆ ತೆರಳಿದರೆ ಮಾನಸಿಕವಾಗಿ ಒಂದಿಷ್ಟು ಶಾಂತಿ ಮತ್ತು ಸಮಾಧಾನ ದೊರೆಯುತ್ತದೆ. ದೇಗುಲಗಳು ಬಾಗಿಲು ಮುಚ್ಚಿದ್ದು ಬೇಸರ ತರಿಸಿತ್ತು. ಸಾಮಾನ್ಯವಾಗಿ ನಾವು ಸಂಜೆಯ ವೇಳೆ ಇಲ್ಲವೆ ಬೆಳಿಗ್ಗೆ ದೇಗುಲಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದೆ. ದೇವರ ದರ್ಶನ ಪಡೆದು ಬಹಳ ದಿನಗಳಾಗಿತ್ತು’ ಎಂದು ಕೆಳಗಿನ ತೋಟದ ಸುಬ್ರಹ್ಮಣ್ಯ ಸ್ವಾಮಿ ದೇಗುಲದ ಬಳಿ ನಿಂತಿದ್ದ ಅರವಿಂದ್ ತಿಳಿಸಿದರು.

ಬಾರ್‌ಗಳಲ್ಲಿ ಮದ್ಯ ಸೇವಿಸಲು ಅವಕಾಶ ನೀಡಿರುವ ಕಾರಣ ಮತ್ತಷ್ಟು ಮೇಜು, ಕುರ್ಚಿಗಳನ್ನು ಬಾರ್‌ ಸಿಬ್ಬಂದಿ ಸಿದ್ಧಗೊಳಿಸಿದರು. ಈ ಹಿಂದೆ ಮಧ್ಯಾಹ್ನ ಎರಡವರೆಗೆ ಮಾತ್ರ ಬಾರ್‌ಗಳು ಆರಂಭವಾಗಿರುತ್ತಿದ್ದವು. ಈಗ ರಾತ್ರಿ 9ರವರೆಗೆ ತೆರೆಯಲು ಅವಕಾಶವಿದೆ. ಆದ ಕಾರಣ ಮತ್ತಷ್ಟು ವ್ಯವಸ್ಥೆಗಳನ್ನು ಸಿಬ್ಬಂದಿ ಮಾಡಿದರು.

ನಂದಿಯಲ್ಲಿ ಗೇಟ್‌ಗೆ ಪೂಜೆ: ಐತಿಹಾಸಿಕ ನಂದಿಯಲ್ಲಿನ ಭೋಗ ನಂದೀಶ್ವರ ಮತ್ತು ಯೋಗನಂದೀಶ್ವರ ದೇಗುಲಗಳ ಆವರಣದಲ್ಲಿನ ಗೇಟ್‌ಗಳನ್ನು ಮುಚ್ಚಲಾಗಿತ್ತು. ಆ ಗೇಟ್‌ಗಳಿಗೆ ಭಕ್ತರು ಪೂಜೆ ಸಲ್ಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.