ಶಿಡ್ಲಘಟ್ಟ: ಕಳೆದ ಕೆಲವು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಸಾದಲಿ ಹೊಸಕೆರೆ ತುಂಬಿ ಹರಿಯುತ್ತಿದೆ.

ಉತ್ತರ ಪೆನ್ನಾರ್ ನದಿ ಕಣಿವೆ ಪ್ರದೇಶದಲ್ಲಿರುವ ಸಾದಲಿ ಹೊಸಕೆರೆ ಅಚ್ಚುಕಟ್ಟು 45 ಹೆಕ್ಟೇರ್ಗಳಷ್ಟಿದೆ. ಈ ಕೆರೆಯ ನೀರಿನ ಶೇಖರಣೆ ಪ್ರದೇಶ 4.21 ಹೆಕ್ಟೇರ್ಗಳಷ್ಟಿದೆ.

ತಾಲ್ಲೂಕಿನ ಸಾದಲಿ ಮತ್ತು ಎಸ್.ದೇವಗಾನಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಬರುವ ಹಲವು ಕೆರೆಗಳು ತುಂಬಿದ್ದು ಈ ಭಾಗದ ಜನರ ಹರ್ಷಕ್ಕೆ ಕಾರಣವಾಗಿದೆ. ಎಸ್.ದೇವಗಾನಹಳ್ಳಿ ಪಂಚಾಯಿತಿಯ ಇರಗಪ್ಪನಹಳ್ಳಿ ಕೆರೆಯೂ ತುಂಬಿದೆ. ಈ ಭಾಗದ ಅಕ್ಕಯ್ಯಗಾರು ಕೆರೆ ಮತ್ತು ಎಸ್.ಗೊಲ್ಲಹಳ್ಳಿ ಕೆರೆಗಳು ತುಂಬಿ ಕೋಡಿ ಹರಿದು ಸಾದಲಿ ಹೊಸಕೆರೆಗೆ ನೀರು ಹರಿದು ಬಂದು ಈಗ ಈ ಕೆರೆಯೂ ತುಂಬಿ ಕೋಡಿ ಹರಿದಿದೆ. ಹರಿಯುತ್ತಿರುವ ನೀರಿನಲ್ಲಿ ಕೊಡಮೆ ಹಾಕಿ ಯುವಕರು ಮೀನು ಹಿಡಿಯುವ ದೃಶ್ಯ ಕಾಣುತ್ತಿತ್ತು. ರಸ್ತೆಯ ಮೇಲೆ ಹರಿದು ಹೋಗುವ ನೀರಿನಲ್ಲಿ ಮಕ್ಕಳು ಆಟ ಆಡುತ್ತಿದ್ದರು.

ಸಾದಲಿ ಹೊಸಕೆರೆ ತುಂಬಿ ಹರಿಯುವ ನೀರು ಸಾದಲಿ ಸಾದಲಮ್ಮನ ಕೆರೆಗೆ ಹರಿಯುತ್ತದೆ. ಅಲ್ಲಿಂದ ಮುಂದೆ ರಾಮಸಮುದ್ರ ಕೆರೆಯ ಕಡೆಗೆ ನೀರು ಹರಿದು ಹೋಗುತ್ತದೆ. ಈಗ ರಾಮಸಮುದ್ರದ ಕೆರೆಯೂ ತುಂಬಿ ಹರಿಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.