ನಗರದ ಬಸ್ ನಿಲ್ದಾಣದ ಬಳಿ ಹಣ್ಣು ಅಂಗಡಿಗಳ ಪಕ್ಕ ಇರುವ ಶೌಚಾಲಯಕ್ಕೆ ಬೀಗ ಜಡಿದಿದ್ದಾರೆ
ಬಿ.ಆರ್.ಅನಂತಕೃಷ್ಣ
ಛಾಯಾ ರಮೇಶ್
ಮುನಿರತ್ನಾಚಾರಿ
ಕೈತಪ್ಪಿದ ಇನ್ಫೋಸಿಸ್ ನೆರವು
ನಮ್ಮ ಟ್ರಸ್ಟ್ ಕಾರ್ಯಕ್ರಮಕ್ಕೆ 2014ರಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿಯನ್ನು ಕರೆಸಿದ್ದೆವು. ಶಿಡ್ಲಘಟ್ಟ ಉತ್ತಮವಾದ ನಾಲ್ಕು ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸಿಕೊಡುವುದಾಗಿ ಹಾಗೂ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿಯೂ ಶೌಚಾಲಯಗಳನ್ನು ಇನ್ಫೋಸಿಸ್ ಫೌಂಡೇಶನ್ ನಿಂದ ಕಟ್ಟಿಸಿಕೊಡುತ್ತೇವೆ ಅದಕ್ಕೆ ನಗರಸಭೆಯಿಂದ ಸ್ಥಳ ಗುರುತಿಸಿ ಪತ್ರ ಕೊಡಿಸಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಎಷ್ಟು ಸರ್ಕಾರಿ ಶಾಲೆಗಳಿಗೆ ಶೌಚಾಲಯ ಬೇಕಿದೆ ಎಂದು ಪತ್ರ ಕೊಡಿಸಿ ಎಂದು ಕೇಳಿದ್ದರು. ಆದರೆ ನಗರಸಭೆಯವರು ಸ್ಥಳ ಗುರುತಿಸಲೇ ಇಲ್ಲ ಮತ್ತು ಪತ್ರವನ್ನೂ ಕೊಡಲಿಲ್ಲ. ಆಗಿನ ಕ್ಷೇತ್ರ ಶಿಕ್ಷಣಾಧಿಕಾರಿ ಶೌಚಾಲಯ ನಿರ್ಮಿಸಿಕೊಟ್ಟರೆ ನೀರಿಗೆ ಏನು ಮಾಡುವುದು ಎಂದು ನನ್ನನ್ನೇ ಪ್ರಶ್ನಿಸಿದ್ದರು. ಐದಾರು ತಿಂಗಳು ನಿರಂತರ ಪ್ರಯತ್ನ ಮಾಡಿ ಕೊನೆಗೂ ಸುಮ್ಮನಾದೆ. ಬಿ.ಆರ್.ಅನಂತಕೃಷ್ಣ ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ನಗರದ ಅಶೋಕ ರಸ್ತೆಯು ವ್ಯಾಪಾರಿ ಸ್ಥಳ. ರಸ್ತೆಯ ಎರಡೂ ಬದಿ ಅಂಗಡಿಗಳಿವೆ. ಬಹಳಷ್ಟು ಮಂದಿ ವ್ಯಾಪಾರಸ್ಥರು ವಯಸ್ಸಾದವರು. ನಮ್ಮಲ್ಲಿ ಬರುವ ಗ್ರಾಹಕರು ಅದರಲ್ಲೂ ಹಳ್ಳಿಗಳಿಂದ ಬರುವವರು ಮಹಿಳೆಯರು ಸಾರ್ವಜನಿಕ ಶೌಚಾಲಯವಿಲ್ಲದ ಕಾರಣ ತುಂಬಾ ಕಷ್ಟಪಡುತ್ತಾರೆ. ನಗರಸಭೆಯಲ್ಲಿರುವ ಶೌಚಾಲಯದ ದುರವಸ್ಥೆ ಬಣ್ಣಿಸಲು ಆಗದು. ವ್ಯಾಪಾರಸ್ಥರೆಲ್ಲರೂ ಹಲವು ಬಾರಿ ನಗರಸಭೆಯವರಿಗೆ ನಮ್ಮ ಸಮಸ್ಯೆ ತಿಳಿಸಿದ್ದೇವೆ. ಆದರೂ ಶೌಚಾಲಯ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಛಾಯಾ ರಮೇಶ್ ಛಾಯಾಚಿತ್ರಗ್ರಾಹಕ ಶೌಚಾಲಯ ಬಹು ಮುಖ್ಯ ಪ್ರತಿದಿನ ಹಳ್ಳಿಗಳಿಂದ ನಗರಕ್ಕೆ ನೂರಾರು ಮಂದಿ ಬಂದು ಹೋಗುತ್ತಾರೆ. ಗಂಡಸರಾದರೆ ಹೇಗೋ ಬೇಸರ ಪಟ್ಟುಕೊಂಡೇ ಚರಂಡಿ ಮುಂತಾದೆಡೆ ಮೂತ್ರ ವಿಸರ್ಜಿಸುತ್ತಾರೆ. ಆದರೆ ಹೆಣ್ಣು ಮಕ್ಕಳು ವಯಸ್ಕರ ಗತಿಯೇನು. ನಗರದ ಅಭಿವೃದ್ಧಿಗೆ ಸ್ವಚ್ಛತೆ ಮತ್ತು ಸಾರ್ವಜನಿಕ ಶೌಚಾಲಯ ಬಹು ಮುಖ್ಯ. ಈ ಬಗ್ಗೆ ಶಿಡ್ಲಘಟ್ಟದ ಹಿರಿಯ ನಾಗರಿಕರ ಪರವಾಗಿ ಶಾಸಕರಿಗೆ ಪೌರಾಯುಕ್ತರಿಗೆ ಮನವಿ ಕೂಡ ನೀಡಿದ್ದೇವೆ. ಮುನಿರತ್ನಾಚಾರಿ ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯ ಸಮಿತಿ ಅಧ್ಯಕ್ಷ