ಮಂಗಳವಾರ, ಮೇ 17, 2022
23 °C

ದೇವಾಲಯ ಜೀರ್ಣೋದ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಕಾಳನಾಯಕನಹಳ್ಳಿಯಲ್ಲಿ ಶ್ರೀಬಸವೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮವು ಗ್ರಾಮಸ್ಥರು ಹಾಗೂ ಕುಲ ಬಾಂಧವರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ನೂರಾರು ಭಕ್ತರು ಸ್ವಾಮಿಯ ಕೈಂಕರ್ಯದಲ್ಲಿ ಭಾಗವಹಿಸಿ ದರ್ಶನ ಪಡೆದು ಪುನೀತರಾದರು. ಕಾಳನಾಯಕನಹಳ್ಳಿಯಲ್ಲಿ ಮಹಾಗಣಪತಿ, ನಂದೀಶ್ವರ, ಪ್ರಸನ್ನ ಪಾರ್ವತಾಂಬ ಸಮೇತ ಶ್ರೀಬಸವೇಶ್ವರ ಸ್ವಾಮಿಯ ದೇವಾಲಯ ಪಾಳು ಬಿದ್ದಿತ್ತು. ಗ್ರಾಮಸ್ಥರು, ಕುಲ ಬಾಂಧವರು ಹಾಗೂ ಭಕ್ತರ ನೆರವಿನಿಂದ ಜೀರ್ಣೋದ್ಧಾರಗೊಳಿಸಲಾಗಿದೆ. ದೇವಾಲಯದಲ್ಲಿ ಗುರುವಾರ ನಾನಾ ಪೂಜೆ, ಹೋಮ, ಹವನ ಹಮ್ಮಿಕೊಳ್ಳಲಾಗಿತ್ತು.

ಸ್ವಾಮಿಯ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಮಹಾಮಂಗಳಾರತಿ ಮಾಡಿ ಪೂಜೆ ನೆರವೇರಿಸಲಾಯಿತು. ಎಲ್ಲ ಭಕ್ತರಿಗೂ ಅನ್ನ ಸಂತರ್ಪಣೆ ನೆರವೇರಿಸಲಾಯಿತು. ವಿಶೇಷವಾಗಿ ಗೋ ಪೂಜೆ ನೆರವೇರಿಸಿ ವಸ್ತ್ರಬಳೆ, ಅರಿಸಿನ ಕುಂಕುಮ ದಾನವನ್ನು ಮಾಡಲಾಯಿತು.

ಮಾಜಿ ಸಂಸದ ಕೆ.ಎಚ್. ಮುನಿಯಪ್ಪ, ಕೋಚಿಮುಲ್ ನಿರ್ದೇಶಕ ಆರ್. ಶ್ರೀನಿವಾಸ್, ಪುಟ್ಟು ಆಂಜಿನಪ್ಪ, ಕೆ. ಗುಡಿಯಪ್ಪ, ಡಾ.ರಮೇಶ್, ಯಲುವಳ್ಳಿ ರಮೇಶ್ ಭೇಟಿ ಕೊಟ್ಟಿದ್ದರು. ದೇವಾಲಯ ನಿರ್ಮಾಣ ಸಮಿತಿಯ ಮುಖ್ಯಸ್ಥರಾದ ಭೀಮೇಶ್, ಶ್ರೀರಾಮಪ್ಪ, ಮಂಜಯ್ಯ, ರಮೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.