ಚಿಂತಾಮಣಿ: ನಗರದ ವಾರ್ಡ್ ನಂ.2ರ ವೆಂಕಟಗಿರಿಕೋಟೆಯಲ್ಲಿ ಗುರುವಾರ ಮಧ್ಯಾಹ್ನ ಮಹಿಳೆಯೊಬ್ಬರು ಮನೆಯೊಂದಕ್ಕೆ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ್ದಾಳೆ. ಮನೆಯಲ್ಲಿದ್ದ ಮಹಿಳೆ ಪ್ರತಿರೋಧ ತೋರಿದ್ದರಿಂದ ಆಕೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾಳೆ.

ವೆಂಕಟಗಿರಿಕೋಟೆಯ ಸಾಹೇರಾ ಅಂಜುಮ್ ಮಧ್ಯಾಹ್ನದ ವೇಳೆಯಲ್ಲಿ ತಮ್ಮ ಬಚ್ಚಲು ಮನೆಯಲ್ಲಿ ಬಟ್ಟೆ ತೊಳೆಯುತ್ತಿದ್ದರು. ಮನೆಯಲ್ಲಿ ಒಬ್ಬಳೇ ಇದ್ದು, ಬಾಗಿಲು ತೆರೆದಿತ್ತು. ಆಗಂತುಕ ಮಹಿಳೆಯೊಬ್ಬಳು ಏಕಾಏಕಿ ಮನೆಯೊಳಗೆ ಬಂದು ಬೀರು ತೆಗೆದು ನಗನಾಣ್ಯಗಳನ್ನು ದೋಚಲು ಪ್ರಯತ್ನಿಸಿದ್ದಾಳೆ. ಶಬ್ದವನ್ನು ಕೇಳಿ ಮಹಿಳೆ ಬಚ್ಚಲು ಮನೆಯಿಂದ ಯಾರು ಎಂದು ಕೂಗಿದ್ದಾರೆ.

ಮಹಿಳೆ ಗಲಿಬಿಲಿಗೊಂಡು ಪಕ್ಕದಲ್ಲಿದ್ದ ಬಕೆಟ್ ಅನ್ನು ಸಾಹೇರಾ ತಲೆಯ ಮೇಲೆ ಬೋರಲು ಹಾಕಿದ್ದಾಳೆ. ಓಣಿಯಿಂದ ಕುತ್ತಿಗೆಯನ್ನು ಬಿಗಿದು, ಕಣ್ಣಿಗೆ ಕಾರದ ಪುಡಿ ಎರಚಿ ಪರಾರಿಯಾಗಿದ್ದಾಳೆ. ಸಾಹೇರಾ ಕಿರುಚಿಕೊಂಡಿದ್ದನ್ನು ಕೇಳಿಸಿಕೊಂಡು ಅಕ್ಕಪಕ್ಕದ ಮನೆಯವರು ಬಂದಿದ್ದಾರೆ. ನಗರಠಾಣೆಗೆ ಮಾಹಿತಿ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಹಲ್ಲೆಗೆ ಒಳಗಾದ ಸಾಹೇರಾ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.