ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ | ಜೂಜಾಟ: ಮೂವರ ಬಂಧನ

Published 28 ಮಾರ್ಚ್ 2024, 13:34 IST
Last Updated 28 ಮಾರ್ಚ್ 2024, 13:34 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ಹೊರವಲಯದ ಕರಿಯಪ್ಪಲ್ಲಿ ಗ್ರಾಮದ ಅಗ್ನಿಶಾಮಕ ದಳದ ಕಟ್ಟಡದ ಹಿಂಭಾಗದಲ್ಲಿ ಜೂಜಾಟದಲ್ಲಿ ನಿರತವಾಗಿದ್ದ ಗುಂಪಿನ ಮೇಲೆ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಕರಿಯಪ್ಪಲ್ಲಿ ಗ್ರಾಮದ ಪ್ರಸಾದ್ ಕುಮಾರ್, ನವೀನ್, ನರಸಿಂಹ ಬಂಧಿತ ಆರೋಪಿಗಳು. ಬಂಧಿತರಿಂದ ₹3,010 ಹಾಗೂ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸಬ್ ಇನ್‌ಸ್ಪೆಕ್ಟರ್ ರವಣಮ್ಮ, ಎಎಸ್‌ಐ ಇಮ್ತಿಯಾಜ್, ಸಿಬ್ಬಂದಿ ಲೋಕೇಶ್, ಚೆನ್ನಕೇಶವ ದಾಳಿಯ ತಂಡದಲ್ಲಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT